×
Ad

ಔರಾದ್‌ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

Update: 2024-03-14 23:02 IST

ಮುಂಬೈ: ಔರಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ದಿನದ ಹಿಂದೆ ಅವರ ನಿವಾಸದಲ್ಲಿದ್ದ ವೇಳೆ ಪ್ರಭು ಚೌಹಾಣ್ ಅವರ ಎದೆ ಬಡಿತದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮುಂಬೈನ ಬಾಂದ್ರಾದ ಹೋಲಿ ಫ್ಯಾಮಿಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಶಾಸಕ ಪ್ರಭು ಚೌಹಾಣ್ ಅವರಿಗೆ ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದೆ.  ಸದ್ಯ ಪ್ರಭು ಚೌಹಾಣ್ ಆರೋಗ್ಯ ಸ್ಥಿತಿ ಸ್ಛಿರವಾಗಿದೆ ಎಂದು ಗೊತ್ತಾಗಿದೆ.

ಈ ಬಾರಿಯ ಬೀದರ್‌ ಲೋಕಸಭಾ  ಕ್ಷೇತ್ರದಿಂದ ಹಾಲಿ ಸಂಸದ ಭಗವಂತ್ ಖೂಬಾಗೆ ಟಿಕೆಟ್ ನೀಡಬೇಡಿ ಎಂದು ಶಾಸಕ ಪ್ರಭು ಚೌಹಾಣ್ ಒತ್ತಾಯಿಸಿದ್ದರು. ಅಲ್ಲದೆ ಖುದ್ದು ಸಮಾರಂಭವೊಂದರಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾಲಿಗೆ ಬಿದ್ದು ಟಿಕೆಟ್‌ ನೀಡದಂತೆ ಮನವಿ ಮಾಡಿದ್ದರು.

ಹಾಲಿ ಸಂಸದ ಭಗವಂತ್ ಖೂಬಾಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಅವರನ್ನು ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News