×
Ad

ಆರೆಸ್ಸೆಸ್ ಹೇಳಿದಂತೆ ಬಿಜೆಪಿಗರು ಸದನದಲ್ಲಿ ಚರ್ಚೆ ಮಾಡಬೇಡಿ: ಶಾಸಕ ಕೋನರೆಡ್ಡಿ

Update: 2023-12-12 13:02 IST

ಬೆಳಗಾವಿ: ಬಿಜೆಪಿಗರು ಆರೆಸ್ಸೆಸ್ ಹೇಳಿದಂತೆ ಸದನದಲ್ಲಿ ಚರ್ಚೆ ಮಾಡಬೇಡಿ. ರೈತರ, ಉತ್ತರ ಕರ್ನಾಟಕ ಭಾಗದ ವಿಷಯಗಳ ಬಗ್ಗೆ ಚರ್ಚೆ ಮಾಡಿ ಎಂದು ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ.

ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಈ ಅಧಿವೇಶನ ಉತ್ತರ ಕರ್ನಾಟಕ ಭಾಗದ ಸಮಸ್ಯೆಗೆ ಪರಿಹಾರ ನೀಡುವ ಅಧಿವೇಶನ. ಭಾರತೀಯ ಜನತಾ ಪಾರ್ಟಿಯ ಶಾಸಕರು ಯಾವುದೇ ಉಪಯುಕ್ತವಲ್ಲದ ವಿಷಯ ತಂದು ಕಾಲಹಾರಣ ಮಾಡಬೇಡಿ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಸದನ ವೇದಿಕೆ ಆಗಬೇಕು. ವಿರೋಧ ಪಕ್ಷದ ನಾಯಕರಿಗೆ ಕೈಮುಗಿದು ಕೇಳುತ್ತೇನೆ, ಸದನವನ್ನು ಸರಿಯಾಗಿ ನಡೆಯಲು ಬಿಡಿ ಎಂದರು.

ನನಗಿರುವ ಮಾಹಿತಿಯಂತೆ ಮಹದಾಯಿ, ಕಳಾಸ ಬಂಡೂರಿ ಯೋಜನೆ ಚಾಲು ಮಾಡಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ. ರಾಜ್ಯ ಸರ್ಕಾರ ಕಾಮಗಾರಿಗಳ ಟೆಂಡರ್ ಕರೆಯಲು ಸಿದ್ದವಿದೆ. ಅನುಮತಿಗಾಗಿ ಸಿದ್ದರಾಮಯ್ಯ, ಡಿಕೆ. ಶಿವಕುಮಾರ್ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಹೋಗಲು ಸಿದ್ದವಿದೆ ಎಂದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News