×
Ad

ಕೋಲಾರ: ಪ್ರತಿಭಟನೆ ವೇಳೆ ಸಂಸದ ​ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ

Update: 2023-09-08 17:17 IST

ಕೋಲಾರ: ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಸರಕಾರದ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ ನಡೆಸಿವೆ.

ಒಬ್ಬ ವ್ಯಕ್ತಿಗೆ 20 ಜೇನ್ನೊಣಗಳು ಮುತ್ತಿಗೆ ಹಾಕುತ್ತಿದ್ದಂತೆ ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಓಡಿದರು. ಮುನಿಸ್ವಾಮಿ ಅವರಿಗೆ ಜೇನ್ನೊಣಗಳು ಕಚ್ಚಿದವು ಎನ್ನಲಾಗಿದೆ.

ಕೆಲವರು ಕಾರು ಹತ್ತಿ ತೆರಳಿದರು. ಇದರಿ‌ದ ಒಮ್ಮೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿ ದಟ್ಟಣೆ ನಿರ್ಮಾಣವಾಯಿತು. ದಾರಿಯುದ್ದಕ್ಕೂ ಜನ ಓಡುತ್ತಲೇ ಇದ್ದರು. ಜೇನ್ನೊಣಗಳು ಬೆನ್ನಟ್ಟಿದವು. ಕೆಲವರು ಬೆಂಕಿ ಹಾಕಿ ಜೇನ್ನೊಣಗಳನ್ನು ಓಡಿಸಲು ಪ್ರಯತ್ನಿಸಿದರು. ಟವೆಲ್, ಕರ್ಚೀಫ್‌ ಮುಖಕ್ಕೆ ಕಟ್ಟಿಕೊಂಡರು. ಗಿಡದ ಜೊಲ್ಲೆ ಹಿಡಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News