×
Ad

ಬಾಬರಿ ಮಸೀದಿ ಧ್ವಂಸ ಮಾಡಿದ ಸಂಘಿಗಳಿಗೂ ನ್ಯಾಯಾಧೀಶರಿಗೆ ಶೂ ಎಸೆದ ಸನಾತನಿ ವಕೀಲನಿಗೂ ಸಾಮ್ಯತೆಗಳಿವೆ: ಬಿ.ಕೆ ಹರಿಪ್ರಸಾದ್‌

"ಜಾತ್ಯಾತೀತವಾದಿಗಳನ್ನು ಇಲ್ಲವಾಗಿಸುವ ವಾತಾವರಣವನ್ನು ಸಮಾಜದಲ್ಲಿ ಆರೆಸ್ಸೆಸ್ ಹುಟ್ಟು ಹಾಕಿದೆ"

Update: 2025-10-06 23:22 IST

ಬಿ.ಕೆ ಹರಿಪ್ರಸಾದ್‌ 

ಬೆಂಗಳೂರು: ದಲಿತ ಸಮುದಾಯವನ್ನು ಪ್ರತಿನಿಧಿಸುವ ಸುಪ್ರೀಂಕೋರ್ಟ್ ನ ನ್ಯಾಯಾಧೀಶರ ಮೇಲಿನ ದಾಳಿಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಹೇಳಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, "ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆಗೂ, ಬಾಬರಿ ಮಸೀದಿ ಧ್ವಂಸ ಮಾಡಿದ ಸಂಘಿಗಳಿಗೂ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೇ ಶೂ ಎಸೆದ ಸನಾತನಿ ವಕೀಲನಿಗೂ ಸಾಮ್ಯತೆಗಳಿವೆ. ಯಾವ ಸಿದ್ದಾಂತ ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಿಯೋ, ಯಾವ ಸಿದ್ದಾಂತ ದೇಶದ ಭಾವೈಕ್ಯತೆಗೆ ಧಕ್ಕೆ ತರುತ್ತಿದೆಯೋ, ಯಾವ ಸಿದ್ದಾಂತ ಸಂವಿಧಾನದ ಮೇಲೆಯೇ ದಾಳಿ ನಡೆಸುತ್ತಿದಿಯೋ, ಯಾವ ಸಿದ್ದಾಂತ ದೇಶದಲ್ಲಿ ಭಯೋತ್ಪದಾನೆಯನ್ನು ಹುಟ್ಟು ಹಾಕುತ್ತಿದೆಯೋ, ಅದೇ ಸಿದ್ದಾಂತವೇ ಇಂದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆಯುವಂತೆ ಮಾಡಿರುವುದು ಸ್ಪಷ್ಟ." ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ದೇಶದ ಸರ್ವೋಚ್ಛ ನ್ಯಾಯಾಧೀಶರ ಮೇಲೆ ಶೂ ಎಸೆದಿರುವ ದುಷ್ಕರ್ಮಿಯ ಪರದೆಯ ಹಿಂದಿನ ಸೂತ್ರದಾರರು ಯಾರು? ದೇಶದ ಅಮಾಯಕ ಜನರ ತಲೆಯಲ್ಲಿ ಮನುಷ್ಯ ವಿರೋಧಿ ಮನಸ್ಥಿತಿ ತುಂಬುತ್ತಿರುವವವರು ಯಾರು? ಅದಕ್ಕೆ ಮೂಲ ಕಾರಣವೇ ಸಮಾಜದಲ್ಲಿ ಆರೆಸ್ಸೆಸ್ ಬಿತ್ತುತ್ತಿರುವ ದ್ವೇಷ....!"‌ ಎಂದು ಅವರು ಹೇಳಿದ್ದಾರೆ.

ಆರೆಸ್ಸೆಸ್‌ ಸಿದ್ದಾಂತದ ವಿರೋಧಿಗಳಾದ ಸಂವಿಧಾನದ ರಕ್ಷಕರು, ಪ್ರಜಾಪ್ರಭುತ್ವವಾದಿಗಳು, ಸಮಾನತಾವಾದಿಗಳು, ಜಾತ್ಯಾತೀತವಾದಿಗಳನ್ನು ಇಲ್ಲವಾಗಿಸುವ ವಿಷಕಾರಿ, ದ್ವೇಷಮಯ ವಾತಾವರಣವನ್ನು ಸಮಾಜದಲ್ಲಿ ಆರೆಸ್ಸೆಸ್ ಹುಟ್ಟು ಹಾಕಿದೆ. ಇಂತಹ ವಿಚ್ಛದ್ರಕಾರಿ ಶಕ್ತಿಗಳ ವಿರುದ್ಧ ದೇಶ ಒಟ್ಟಾಗಿ ಮುಖಾಮುಖಿಯಾಗಬೇಕಿದೆ. ದಲಿತ ಸಮುದಾಯವನ್ನು ಪ್ರತಿನಿಧಿಸುವ ಸುಪ್ರೀಂಕೋರ್ಟ್ ನ ನ್ಯಾಯಾಧೀಶರ ಮೇಲಿನ ದಾಳಿಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಸಿಜೆಐ ಗವಾಯಿಯವ ಬೆನ್ನಿಗೆ ದೇಶದ ಪ್ರಜ್ಞಾವಂತ ಜನರು ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News