×
Ad

ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡೆಯಬೇಕಿದ್ದರೆ ಪುಡಿ ರೌಡಿ ಅಥವಾ ರೇಪಿಸ್ಟ್ ಆಗಿರಬೇಕು: ಬಿ.ಕೆ. ಹರಿಪ್ರಸಾದ್‌ ಟೀಕೆ

"ಆರೆಸ್ಸೆಸ್ ಬೆಳಕಿನ ಸಾಮ್ರಾಜ್ಯವೋ, ದೇಶಕ್ಕೆ ಅಂಟಿದ ಕಗ್ಗತ್ತಲೆಯ ಕಾರ್ಮೋಡವೋ ಎಂಬುದು ಜನರಿಗೆ ಗೊತ್ತಿದೆ"

Update: 2025-08-18 20:32 IST

ಬಿ.ಕೆ. ಹರಿಪ್ರಸಾದ್‌ (Photo: facebook)

ಬೆಂಗಳೂರು: ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡಿಯಬೇಕಿದ್ದರೆ ಒಂದೋ ಪುಡಿ ರೌಡಿಗಳಾಗಿರಬೇಕು ಅಥವಾ ರೇಪಿಸ್ಟ್ ಆಗಿರಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಟೀಕಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ನಲ್ಲಿ ಮಾಡಿರುವ ಅವರು, "ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡಿಬೇಕು ಅಂದ್ರೆ ಒಂದೋ ಪುಡಿ ರೌಡಿಗಳಾಗಿರಬೇಕು, ಇಲ್ಲ ರೇಪಿಸ್ಟ್ ಆಗಿರಬೇಕು, ಕನಿಷ್ಟ ಪಕ್ಷ ಎರಡ್ಮೂರು ಬಾರಿ ಜೈಲಿಗಾದರೂ ಹೋಗಿ ಬಂದಿರಬೇಕು. ಅಂತವರಿಗಾಗಿಯೇ ಪ್ರತ್ಯೇಕ ಸೆಲ್ ಮಾಡಿಕೊಂಡಿರುವ ಬಿಜೆಪಿ  ಪವಿತ್ರ ಖಾದಿ ಬಟ್ಟೆ ಬಗ್ಗೆ ಮಾತಾಡುವುದು ಹಾಸ್ಯಸ್ಪದವಲ್ಲ, ಯಾವ ನೈತಿಕತೆಯೂ ಇಲ್ಲ." ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯ ಅಧ್ಯಕ್ಷನೇ ಚೆಕ್ ಮೂಲಕ ಲಂಚ ಪಡೆದು ಹುದ್ದೆ ಗಿಟ್ಟಿಸಿಕೊಂಡಿರುವಾಗ, ಕೇಂದ್ರದ ಗೃಹ ಸಚಿವರನ್ನೇ ಕೋರ್ಟ್ ಗಡಿಪಾರು ಮಾಡಿರುವಾಗ, ರಾಜಧರ್ಮ ಪಾಲಿಸದ ಪ್ರಧಾನ ಮಂತ್ರಿಯೇ ಇರುವಾಗ ಉಳಿದವರದ್ದು ಯತಾ ರಾಜಾ, ತಥಾ ಪಟಾಲಂ ಅಲ್ವೇ ಎಂದು ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ.

ಆರೆಸ್ಸೆಸ್ ಬೆಳಕಿನ ಸಾಮ್ರಾಜ್ಯವೋ, ದೇಶಕ್ಕೆ ಅಂಟಿದ ಕಗ್ಗತ್ತಲೆಯ ಕಾರ್ಮೋಡವೋ ಎಂಬುದು ದೇಶದ ಜನರಿಗೆ ಗೊತ್ತಿದೆ. ಆರೆಸ್ಸೆಸ್ ಅಂತರಂಗಗಳು ನರಕದ ಗರ್ಭಗುಡಿಯೊಳಗೆ ಬಚ್ಚಿಟ್ಟಿದ್ದಕ್ಕಿಂತ, ಹೂತಿಟ್ಟಿದ್ದೇ ಹೆಚ್ಚು. ಇಂತಹ ಪಾತಕಿತನಗಳನ್ನು ಬಯಲು ಮಾಡುತ್ತಲೇ ಇರುತ್ತೇನೆ. ಎರಡು ರೂಪಾಯಿಯ ಗತಿಗೇಡಿ ಭಕ್ತರ ಅಪಪ್ರಚಾರಕ್ಕೆ ಕಿವಿಗೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News