×
Ad

ಮೈ ಮೇಲೆ ಬಿಸಿ ಸಾಂಬಾರು ಬಿದ್ದು ಬಾಲಕ ಮೃತ್ಯು

Update: 2023-11-03 12:03 IST

ಸಮರ್ಥ್‌ - ಮೃತ ಬಾಲಕ  

ದಾವಣಗೆರೆ: ಮೈ ಮೇಲೆ ಬಿಸಿ ಸಾಂಬಾರು ಬಿದ್ದು ತೀವ್ರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ವರದಿಯಾಗಿದೆ. 

ಸಮರ್ಥ್‌ (10) ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಬಾಲಕ ಎಂದು ತಿಳಿದು ಬಂದಿದೆ. 

ಮನೆಯಿಂದ ಪಕ್ಕದ ಮನೆಗೆ ಬಿಸಿ ಸಾಂಬಾರು ತೆಗೆದುಕೊಂಡು ಹೋಗುವಾಗ ಸಮರ್ಥ್‌ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ಬಿಸಿ ಸಾಂಬಾರು ಮೈಮೇಲೆ ಬಿದ್ದು ಸಮರ್ಥ್‌ ತೀವ್ರ ಗಾಯಗೊಂಡಿದ್ದ ಎಂದು ಹೇಳಲಾಗಿದೆ. 

ತಕ್ಷಣ ಸಮರ್ಥ್‌ ನನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News