×
Ad

ಲಂಚ ಸ್ವೀಕಾರ: ಆಳಂದ ತಹಶೀಲ್ದಾರ್ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

Update: 2023-08-31 19:38 IST

ಬಂಧಿತ ತಹಶೀಲ್ದಾರ್ 

ಕಲಬುರಗಿ: ಎನ್ಎ ಎನ್ಓಸಿ ಕೊಡಲು ಡಿಸಿಗೆ ಶಿಫಾರಸು ಮಾಡೋಕೆ 12 ಸಾವಿರ ರೂ. ಡಿಮ್ಯಾಂಡ್ ಮಾಡಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಆಳಂದ ಪಟ್ಟಣದ ತಹಶೀಲ್ದಾರ್ ಮತ್ತು ಆರ್.ಐ ಇಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.

ಆಳಂದ ತಾಲೂಕಿನ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಕಂದಾಯ ಅಧಿಕಾರಿ ರಾಜಶೇಖರ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು ಎಂದು ತಿಳಿದು ಬಂದಿದೆ.

ಕಂದಾಯ ಅಧಿಕಾರಿ ರಾಜಶೇಖರ್ ಮೂಲಕ 12 ಸಾವಿರ ರೂ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದಾರೆ. ಮೆಹಬೂಬ್ ಪಟೇಲ್ ಲಂಬೇವಾಡಿ ಎಂಬಾತರಿಗೆ ಎನ್ಎ ಎನ್ಓಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದರು ಎಂದು ಹೇಳಲಾಗಿದೆ.

ಎನ್ಎ ಎನ್ಓಸಿ ಕೊಡಲು ಡಿಸಿಗೆ ಶಿಫಾರಸು ಮಾಡೋದಕ್ಕೆ ತಹಶಿಲ್ದಾರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದ ತಿಳಿದು ಬಂದಿದೆ.

ಲೋಕಾಯುಕ್ತ ಎಸ್ಪಿ ಕರ್ನೂಲ್, ಮಾರ್ಗದರ್ಶನದಲ್ಲಿ ಸಿಪಿಐಗಳಾದ ನಾನಾಗೌಡ, ದ್ರುವತಾರೆ, ಅಕ್ಕಮಹಾದೇವಿ ನೇತೃತ್ವದಲ್ಲಿ ಗುರುವಾರ ತಹಶೀಲ್ ಕಚೇರಿ ಮೇಲೆ ದಾಳಿ ನಡೆಸಿ ತಹಶಿಲ್ದಾರ್ ಯಲ್ಲಪ್ಪ ಸುಬೇದಾರ್, ಆರ್ಐ ರಾಜಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News