×
Ad

ಎರಡೂವರೆ ವರ್ಷದ ಬಳಿಕ ಸಂಪುಟ ಬದಲಾವಣೆ; ನನಗೂ ಮಂತ್ರಿ ಸ್ಥಾನ ಸಿಗುತ್ತೆ ಎಂದ ಶಾಸಕ ಅಶೋಕ್ ಪಟ್ಟಣ್‌

Update: 2023-10-20 12:54 IST

Photo Credit Twitter- @NsBoseraju

ಬೆಂಗಳೂರು: ʼಎರಡೂವರೆ ವರ್ಷದ ಮೇಲೆ ಸಚಿವ ಸಂಪುಟ ಬದಲಾವಣೆ ಆಗಲಿದೆʼ ಎಂದು ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ, ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ್ ಪಟ್ಟಣ್‌ ಹೇಳಿದ್ದಾರೆ.  

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಈಗ ಎಲ್ಲರಿಗೂ ಮಂತ್ರಿಸ್ಥಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಎರಡೂವರೆ ವರ್ಷದ ಬಳಿಕ ನಿಮಗೆಲ್ಲ ಅವಕಾಶ ನೀಡುವುದಾಗಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿದಂತೆ ಎಲ್ಲಾ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ನನಗೂ ಅವಕಾಶ ಸಿಗುವ ಭರವಸೆ ಇದೆʼʼ ಎಂದು ತಿಳಿಸಿದರು. 

ʼನಾನು ಈಗಾಗಳೇ  2  ಬಾರಿ ಸಚಿವನಾಗಿರಬೇಕಾಗಿತ್ತು. ಆದರೆ ಜಾತಿ ನೋಡಿ ಸಚಿವ ಸ್ಥಾನ ನೀಡಲಾಗಿದೆ, ಹೀಗಾಗಿ ನನಗೆ ಸಿಕ್ಕಿಲ್ಲ. ಅನುಭವ ನೋಡಿ ಮಂತ್ರಿ ಮಾಡಿ ಅಂತಾ ಕೆ.ಸಿ ವೇಣು ಗೋಪಾಲ್‌, ಸುರ್ಜೇವಾಲಾ, ಡಿಕೆಶಿ ಸೇರಿ ಸಂಬಂಧಪಟ್ಟವರಿಗೆ  ಮನವಿ ಮಾಡಿದ್ದೇನೆʼ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News