×
Ad

ಬೀದರ್ | ಮನೆ ಮೇಲೆ ದಾಳಿಗೆ ಯತ್ನ, ಮುಸ್ಲಿಮ್ ಕುಟುಂಬಕ್ಕೆ ಬೆದರಿಕೆ ಆರೋಪ: ಬಿಜೆಪಿ ಶಾಸಕ ಶರಣು ಸಲಗರ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲು

Update: 2023-07-06 16:30 IST

 ಶರಣು ಸಲಗರ- ಶಾಸಕರು

ಬೀದರ್: ಗೋ ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮನೆ ಮೇಲೆ ದಾಳಿಗೆ ಯತ್ನಿಸಿ, ಬೆದರಿಕೆ, ದ್ವೇಷದ ಮಾತುಗಳನ್ನಾಡಿರುವ ಆರೋಪದ ಮೇರೆಗೆ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ನಗರದ ಹಿರೇಮಠ ಕಾಲೊನಿಯ ಮೆಹರಾಜ್ ಎಂಬವರು ನೀಡಿದ ದೂರಿನ ಅನ್ವಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಬಕ್ರೀದ್​ ಹಬ್ಬದಂದು ಮನೆಯಲ್ಲಿ 'ಕುರ್ಬಾನಿ' ಕೊಡುತ್ತಿದ್ದಾಗ ಶರಣು ಸಲಗರ ಮತ್ತು ಅವರ ಬೆಂಬಲಿಗರು ಹಿರೇಮಠ ಕಾಲೊನಿಯ ನಮ್ಮ ಮನೆ ಹತ್ತಿರ ಬಂದು ಹೆದರಿಸಿದ್ದಾರೆ. ಏಕೆ ನೀವು ಮನೆಯಲ್ಲಿ ಕುರ್ಬಾನಿ ಕೊಡುತ್ತೀರಿ? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿಮ್ಮದು ಜಾಸ್ತಿಯಾಗಿದೆ. ನಿಮಗೆ ಹೇಗೆ ಪಾಠ ಕಲಿಸಬೇಕು ಎಂದು ನಮಗೆ ಗೊತ್ತಿದೆ ಎಂದು ಹೆದರಿಸಿದ್ದಾರೆ. ಅಲ್ಲದೇ ಮನೆಯೊಳಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎಂದು  ಮೆಹರಾಜ್ ದೂರಿನಲ್ಲಿ ತಿಳಿಸಿದ್ದಾರೆ. 

'ಶಾಸಕರು ತಮ್ಮ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ' ಎಂದೂ ದೂರಿನಲ್ಲಿ ತಿಳಿಸಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News