×
Ad

ಡಾ.ರಾಜ್‍ಕುಮಾರ್ ಕುಟುಂಬದವರ ಕುರಿತು ಅವಹೇಳನಕಾರಿ ಹೇಳಿಕೆ: ಆರೋಪಿ ಸಿಸಿಬಿ ವಶಕ್ಕೆ

Update: 2025-09-15 20:40 IST

ಬೆಂಗಳೂರು: ವರನಟ ಡಾ.ರಾಜ್‍ಕುಮಾರ್ ಹಾಗೂ ಅವರ ಕುಟುಂಬದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಡಿ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ವಿನೋದ್ ಶೆಟ್ಟಿ(38)ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಜಾಲತಾಣದಲ್ಲಿ ವರನಟ ಡಾ.ರಾಜ್‍ಕುಮಾರ್ ಹಾಗೂ ಅವರ ಕುಟುಂಬದವರ ಬಗ್ಗೆ ಆರೋಪಿಯು ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ ವಿಡಿಯೋ ಹರಿಬಿಟ್ಟಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಾ.ರಾಜ್‍ಕುಮಾರ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಆರೋಪಿ ವಿನೋದ್ ಶೆಟ್ಟಿಗೆ ಕರೆ ಮಾಡಿ ಹಲವು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ನಂತರ ಕ್ಷಮೆ ಕೇಳಿದ ವಿನೋದ್ ಶೆಟ್ಟಿ, ಡಾ.ರಾಜ್‍ಕುಮಾರ್ ಅವರ ಬಗ್ಗೆ ನಾನು ಹಾಗೇ ಮಾತನಾಡಬಾರದಿತ್ತು. ಕರ್ನಾಟಕದ ಜನರಲ್ಲಿ ಕ್ಷಮೆ ಕೇಳುತ್ತೇನೆ. ರಾಜ್ ಅಭಿಮಾನಿಗಳು ನಟ ವಿಷ್ಣುವರ್ಧನ್ ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಆ ಕಾರಣಕ್ಕೆ ನಾನು ಈ ರೀತಿ ಮಾತನಾಡಿ ವಿಡಿಯೋ ಮಾಡಿದ್ದೆ ಎಂದು ಹೇಳಿದ್ದರು. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News