×
Ad

ನಾಳೆ (ಮೇ 24) ಸಿಇಟಿ ಫಲಿತಾಂಶ ಪ್ರಕಟ

Update: 2025-05-23 18:11 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‍ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶವು ನಾಳೆ(ಮೇ 24) ಪ್ರಕಟವಾಗಲಿದೆ.

ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆ ನಂತರ https://cetonline.Karnataka.gov.in/ugcetrank2025/checkresult.aspx  ಅಥವಾ https://karresults.nic.in  ಜಾಲತಾಣಗಳಿಗೆ ಸಂಪರ್ಕಿಸಿ ಪರಿಶೀಲಿಸಬಹುದಾಗಿದೆ.

ಎ.16 ಮತ್ತು 17ರಂದು ಕೆಇಎ ರಾಜ್ಯದ 775 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಿತ್ತು. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಮಾತ್ರ ಎ.15ರಂದು ಕನ್ನಡ ಭಾಷಾ ಪರೀಕ್ಷೆಯನ್ನು ಐದು ಕೇಂದ್ರಗಳಲ್ಲಿ ನಡೆಸಿತ್ತು. ಒಟ್ಟು ಸಿಇಟಿ ಪರೀಕ್ಷೆಗೆ 3.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡು, ಶೇ.94ರಷ್ಟು ಮಂದಿ ಪರೀಕ್ಷೆಯನ್ನು ಬರೆದಿದ್ದಾರೆ. ಕನ್ನಡ ಭಾಷಾ ಪರೀಕ್ಷೆಗೆ ಒಟ್ಟು 2,500 ಅರ್ಜಿ ಸಲ್ಲಿಸಿದ್ದು, 1,958 ಮಂದಿ ಪರೀಕ್ಷೆ ಬರೆದಿದ್ದಾರೆ.

ಗಣಿತ ಪರೀಕ್ಷೆಯನ್ನು 3,04,186 ಹಾಗೂ ಜೀವ ವಿಜ್ಞಾನ ಪರೀಕ್ಷೆಯನ್ನು 2,39,848 ಮಂದಿ ಬರೆದಿದ್ದಾರೆ. ಭೌತವಿಜ್ಞಾನ ವಿಷಯವನ್ನು 3,11,690 ಹಾಗೂ ರಸಾಯನ ವಿಜ್ಞಾನ ವಿಷಯವನ್ನು 3,11,690 ಮಂದಿ ಬರೆದಿದ್ದಾರೆ. ಈ ಎಲ್ಲ ಅಭ್ಯರ್ಥಿಗಳ ಫಲಿತಾಂಶವನ್ನು ನಾಳೆ(ಮೇ 23) ಬೆಳಿಗ್ಗೆ 11.30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕೆಇಎ ಕಚೇರಿಯಲ್ಲಿ ಪ್ರಕಟಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News