ʼದಸರಾ ಉದ್ಘಾಟನೆ ವಿಚಾರʼ ಅನಾವಶ್ಯಕ ವಿವಾದಕ್ಕೆ ತೆರೆ ಎಳೆಯಬೇಕು : ಸಚಿವ ಚಲುವರಾಯಸ್ವಾಮಿ
Update: 2025-08-29 19:32 IST
ಬೆಂಗಳೂರು, ಆ.29: ದಸರಾ ಮಹೋತ್ಸವ ನಾಡಹಬ್ಬವಾಗಿದೆ. ಹೀಗಾಗಿ ಅನಾವಶ್ಯಕ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಯನ್ನು ಮುಂದೆ ಇಟ್ಟು ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಈ ಬಾರಿ ದಸರಾ ಉದ್ಘಾಟನೆ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸರಿಯಿದೆ. ಆದರೆ, ದಸರಾ ಮಹೋತ್ಸವ ಯಾರಿಂದ ಉದ್ಘಾಟಿಸಬೇಕೆಂದು ಪ್ರತಿಪಕ್ಷಗಳಿಂದ ಅನುಮತಿ ಕೇಳಲು ಆಗುವುದಿಲ್ಲ ಎಂದು ತಿಳಿಸಿದರು.