×
Ad

ಪ್ರಧಾನಿ ಮೋದಿ ಅವರ ಹೊಣೆಗಾರಿಕೆಯನ್ನು ‘ಮುಖ್ಯಮಂತ್ರಿ ಮೋದಿ’ ಬಯಲು ಮಾಡಿದ್ದಾರೆ : ಪ್ರಿಯಾಂಕ್ ಖರ್ಗೆ

ಮೋದಿ ಅವರ ಹಳೆಯ ವಿಡಿಯೋ ಪೋಸ್ಟ್‌ ಮಾಡಿದ ಸಚಿವ

Update: 2025-11-12 12:03 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿ ಅವರ ಹೊಣೆಗಾರಿಕೆಯನ್ನು ‘ಮುಖ್ಯಮಂತ್ರಿ ಮೋದಿ’ ಅವರಿಗಿಂತ ಸ್ಪಷ್ಟವಾಗಿ ಬಯಲು ಮಾಡಬಲ್ಲವರು ಯಾರೂ ಇಲ್ಲ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಬಗ್ಗೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಮೋದಿ ನೀಡಿದ್ದ ಭಯೋತ್ಪಾದನೆ ಕುರಿತ ಹೇಳಿಕೆಯ ವಿಡಿಯೋವನ್ನು ಪ್ರಿಯಾಂಕ್ ಖರ್ಗೆ ಬುಧವಾರ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

“ಪ್ರಧಾನಿ ಪಾಲಿಗೆ ಹೊಣೆಗಾರಿಕೆ ಎಂಬುದು ಇತರರಿಗೆ ಮಾತ್ರ ಅನ್ವಯಿಸುತ್ತದೆ. ವಿರೋಧದಲ್ಲಿದ್ದಾಗ ಹೊಣೆಗಾರಿಕೆಯ ಕುರಿತು ಮಾತನಾಡುತ್ತಿದ್ದ ಮೋದಿ, ಅಧಿಕಾರಕ್ಕೆ ಬಂದ ನಂತರ ಅದರಿಂದ ದೂರ ಉಳಿಯುತ್ತಿದ್ದಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

“ಪ್ರಧಾನಿ ಮೋದಿ ಪಲಾಯನವಾದಿ. ಸುದ್ದಿಗೋಷ್ಠಿಯಿಂದ ತಪ್ಪಿಸಿಕೊಳ್ಳುತ್ತಾರೆ, ಸಂಸತ್ತನ್ನು ಕಡೆಗಣಿಸುತ್ತಾರೆ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ವಿಷಯಾಂತರ ಮಾಡುತ್ತಾರೆ” ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News