×
Ad

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕಳ್ಳತನ!

Update: 2023-12-15 15:14 IST

ಚಿಕ್ಕಮಗಳೂರು, ಡಿ.15: ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಕಚೇರಿಯಲ್ಲಿ ಕಳವು ನಡೆದಿರುವ ಬಗ್ಗೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಕೆ.ಜೆ. ಜಾರ್ಜ್ ಕಚೇರಿಯಲ್ಲಿ ಸಚಿವರ ಖಾಸಗಿ ಆಪ್ತ ಸಹಾಯಕ ಮೋಗಣ್ಣ ಅವರ ಬ್ಯಾಗ್ ಕಳ್ಳತನವಾಗಿದೆ. ಅದರಲ್ಲಿ ಫೈಲ್, ಖಾಸಗಿ ಡಾಕ್ಯುಮೆಂಟ್, 15 ಸಾವಿರ ರೂ. ನಗದು ಇತ್ತು ಎಂದು ತಿಳಿದು ಬಂದಿದೆ.

ಮೋಗಣ್ಣ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬ್ಯಾಗ್ ಇಟ್ಟು ತೆರಳಿದ್ದಾಗ ಕಳ್ಳರ ಕೈಚಳಕ ಪ್ರದರ್ಶಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಪ್ರವಾಸಿ ಮಂದಿರದಲ್ಲಿ ಸಿಸಿಟಿವಿ ಕ್ಯಾಮರಾಗಳು ಕೆಟ್ಟು ಹೋಗಿವೆ.

ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News