×
Ad

ಚಿತ್ರದುರ್ಗ: ಲಾರಿಗೆ ಕಾರು ಢಿಕ್ಕಿ; ನಾಲ್ವರು ಸಾವು

Update: 2023-09-04 13:18 IST

ಚಿತ್ರದುರ್ಗ, ಸೆ.04: ಭೀಕರ ರಸ್ತೆ ಅಪಘಾತದಲ್ಲಿಗಂಡ, ಹೆಂಡತಿ, ಮಗ ಸೇರಿದಂತೆ ನಾಲ್ಕು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲ್ಲಾಪುರ ಗೊಲ್ಲರಹಟ್ಟಿ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರನ್ನು ತುಮಕೂರು ಮೂಲದ ಖಲೀಲ್(42) ಮಲ್ಲಿಕಾ(37) ತಬ್ರೇಜ್(13) ಹಾಗೂ ಕಾರು ಚಾಲಕ ಸಂಶುದ್ದೀನ್(40)ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ನರ್ಗಿಶ್, ರೆಹಾನ್, ರೆಹಮಾನ್ ಇವರು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕಾರು ಮಲ್ಲಾಪುರ ಗೊಲ್ಲರಹಟ್ಟಿ ರಾಷ್ಟ್ರೀಯ ಹೆದ್ದಾರಿ -48ರ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪರಿಣಾಮ ದಂಪತಿ, ಓರ್ವ ಮಗ ಹಾಗೂ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಗಂಭೀರವಾಗಿ ಗಾಯಗೊಂಡಿರುವ ದಂಪತಿಯ ಮೂರು ಮಕ್ಕಳು  ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News