×
Ad

ಚಿತ್ರದುರ್ಗ | ಟಿವಿ ರಿಮೋಟ್ ವಿಚಾರಕ್ಕೆ ಮಕ್ಕಳ ಮಧ್ಯೆ ಜಗಳ, ಸಿಟ್ಟಿಗೆದ್ದು ಕತ್ತರಿ ಎಸೆದ ತಂದೆ; ಮಗ ಮೃತ್ಯು

Update: 2023-10-15 13:40 IST
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಟಿವಿ ರಿಮೋಟ್ ವಿಚಾರಕ್ಕೆ ಇಬ್ಬರು ಮಕ್ಕಳ ಮಧ್ಯೆ ನಡೆದ ಜಗಳದಳಲ್ಲಿ ಓರ್ವ ಮೃತಪಟ್ಟಿರುವ ಘಟನೆ ಮೊಳಕಾಲ್ಮೂರು NMS ಬಡಾವಣೆಯಲ್ಲಿ ಶನಿವಾರ ರಾತ್ರಿ ವರದಿಯಾಗಿದೆ.

ಚಂದ್ರಶೇಖರ್ (16) ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ.

ಟಿ.ವಿ. ರಿಮೋಟ್ ಬೇಕು ಎಂಬ ವಿಚಾರಕ್ಕಾಗಿ ಇಬ್ಬರು ಮಕ್ಕಳು ಜಗಳ ಆಡುತ್ತಿದ್ದಾಗ, ಪಾರ್ಶ್ವವಾಯು ಪೀಡಿತನಾಗಿದ್ದ  ತಂದೆ ಲಕ್ಷ್ಮಣ ಬಾಬು ಎಂಬುವವರು ಸಿಟ್ಟಿಗೆದ್ದು ಕುಳಿತಲ್ಲಿಂದಲೇ ಬೀಸಿ ಎಸೆದ ಕತ್ತರಿಯಿಂದ ಚಂದ್ರಶೇಖರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಕತ್ತರಿ ಚಂದ್ರಶೇಖರನ ಕುತ್ತಿಗೆಯ ಬಲಭಾಗಕ್ಕೆ ಬಿದ್ದ ಕಾರಣ ತೀವ್ರ ರಕ್ತ ಸ್ರಾವವಾಗಿದೆ. ತಕ್ಷಣ ಚಂದ್ರಶೇಖರನ ತಾಯಿ ಗಾಯಾಳು ಪುತ್ರನನ್ನು ಪಟ್ಟಣದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ‌. ಆದರೆ ಮಾರ್ಗ ಮಧ್ಯೆ ರಾಂಪುರ ಸಮೀಪ ಪುತ್ರ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಪಿಎಸ್ಐ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News