×
Ad

ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಯುವತಿ ಮೃತ್ಯು, 20ಕ್ಕೂ ಹೆಚ್ಚು ಜನರು ಅಸ್ವಸ್ಥ

Update: 2023-08-01 14:09 IST

ನಗರಸಭೆ ಆಡಳಿತ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು

ಚಿತ್ರದುರ್ಗ: ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತಪಟ್ಟಿರುವ ಯುವತಿಯನ್ನು ಮಂಜುಳಾ(21) ಎಂದು ಗುರುತಿಸಲಾಗಿದೆ.  

ಕಲುಷಿತ ನೀರು ಕುಡಿದು ಅಸ್ವಸ್ಥತರಾದವನ್ನು ಚಿಕಿತ್ಸೆಗಾಗಿ ಬಸವೇಶ್ವರ ಖಾಸಗಿ ಮತ್ತು ದಾವಣಗೆರೆಯ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಕಲುಷಿತ ನೀರು ಕುಡಿದು ಮೃತಪಟ್ಟ ಯುವತಿ ಮಂಜುಳ ಅವರ ಮೃತ ದೇಹವನ್ನು ಜಿಲ್ಲಾಧಿಕಾರಿಗಳು ಬರುವ ವರೆಗೆ ತೆರವುಗೊಳಿಸಲಾಗುವುದಿಲ್ಲವೆಂದು ಕವಾಡಿಗರಹಟ್ಟಿ ಜನರು  ಪಟ್ಟು ಹಿಡಿದಿದ್ದು, ಕಲುಷಿತ ನೀರು ಸರಬರಾಜು ಮಾಡಿರುವ ನಗರ ಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಮೃತ ಯುವತಿಯ ಶವವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶವಗಾರದಲ್ಲಿ ಪರಿಶೀಲನೆ ನಡೆಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News