×
Ad

ಜನತಾ ದರ್ಶನ: ಜನರ ಸಮಯ ವ್ಯರ್ಥವಾಗಬಾರದೆಂದು ಅಹವಾಲು ಸ್ವೀಕರಿಸುತ್ತಾ ಊಟ ಮಾಡಿದ ಸಿಎಂ ಸಿದ್ದರಾಮಯ್ಯ

Update: 2023-11-27 19:54 IST
Photo: X/Siddaramaiah

ಬೆಂಗಳೂರು: ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಜನತಾ ದರ್ಶನಕ್ಕೆ ರಾಜ್ಯದ ವಿವಿಧ ಭಾಗದಿಂದ ಜನರು ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ.

ಜನರ ಸಮಯ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು, ಊಟಕ್ಕೆ ಹೋಗಿ ಬರುವ ಸಮಯವನ್ನು ಉಳಿಸಲು ಅಲ್ಲೇ ಊಟ ಮಾಡಿದ್ದಾರೆ.

ಈ ಕುರಿತು ಸ್ವತಃ ಅವರೇ ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ಮಾಹಿತಿ ನೀಡಿದ್ದು, “ಇಂದಿನ ಜನತಾ ದರ್ಶನದಲ್ಲಿ ಅಹವಾಲು ಹೊತ್ತು ಬಂದವರ ಸಂಖ್ಯೆ ಬಹಳಷ್ಟಿದೆ. ದೂರದ ಊರುಗಳಿಂದ ಬಂದ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಿಕೊಡಬೇಕಾದುದ್ದು ನನ್ನ ಕರ್ತವ್ಯ. ಹೀಗಾಗಿ ಊಟಕ್ಕೆ ಹೋಗಿ ಬರುವ ಸಮಯವನ್ನು ಉಳಿಸಿ, ಆ ಸಮಯವು ಮತ್ತಷ್ಟು ಜನರ ಕಷ್ಟ ಕೇಳಲು ಸದ್ಬಳಕೆಯಾಗಲಿ ಎಂದು ಜನತಾ ದರ್ಶನಕ್ಕೆ ಕುಳಿತಿದ್ದ ಜಾಗದಲ್ಲೇ ಬೇಗನೆ ಊಟ ಮಾಡಿ ಮುಗಿಸಿ ಮತ್ತೆ ಜನರ ಅಹವಾಲಿಗೆ ಕಿವಿಯಾಗಿದ್ದೇನೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News