×
Ad

ನೀವು ಕೇರ್ ಮಾಡಲ್ಲ ಎಂದರೆ, ನಾವು ನಿಮ್ಮನ್ನು ಕೇರ್ ಮಾಡಲ್ಲ: ಎಚ್‍ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

Update: 2023-07-06 20:38 IST

ಬೆಂಗಳೂರು, ಜು.6: ‘ನಿಮ್ಮನ್ನು ಕಂಡರೆ ಯಾರು ಹೆದರಿಕೊಳ್ಳುವುದಿಲ್ಲ. ನೀವು ಕೇರ್ ಮಾಡಲ್ಲ ಎಂದರೆ, ನಾವು ನಿಮ್ಮನ್ನು ಕೇರ್ ಮಾಡಲ್ಲ. ಸುಮ್ಮನೆ ಕೆಲಸಕ್ಕೆ ಬಾರದ ವಿಚಾರಗಳನ್ನೆಲ್ಲ ಪ್ರಸ್ತಾವ ಮಾಡಬೇಡಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಸಾರಿಗೆ ನೌಕರ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳ ಚೆನ್ನಾಗಿ ಉತ್ತರ ನೀಡಿದ್ದೀಯಾ ಎಂದು ಸಚಿವ ಚಲುವರಾಯಸ್ವಾಮಿಗೆ ಮುಖ್ಯಮಂತ್ರಿ ಶೇಕ್‍ಹ್ಯಾಂಡ್(ಹಸ್ತಲಾಘವ) ಮಾಡಿ ಅಭಿನಂದಿಸಿರುವುದು ನಾಚಿಕೆಗೇಡು ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಸಚಿವರು ಬಂದು ಸೌಜನ್ಯಕ್ಕೆ ನಮ್ಮ ಕೈ ಕುಲುಕಿದರೆ ಅದನ್ನು ಈ ರೀತಿ ಬಿಂಬಿಸಬೇಕೆ. ನೀವು ನಮ್ಮನ್ನು ಕೇರ್ ಮಾಡದಿದ್ದರೆ ಬೇಡ, ನಾವು ನಿಮ್ಮನ್ನು ಕೇರ್ ಮಾಡಲ್ಲ. ನಿಮ್ಮಂತಹವರನ್ನು ನಾನು ಬಹಳಷ್ಟು ಜನರನ್ನು ನೋಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News