×
Ad

ರಾಜ್ಯದಲ್ಲಿ ತೆಂಗಿನಕಾಯಿ ದರ ಗಣನೀಯ ಹೆಚ್ಚಳ

Update: 2025-07-01 23:59 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಯಾವಾಗಲೂ ಒಂದು ಕೆ.ಜಿ. ತೆಂಗಿನಕಾಯಿಗೆ 30ರಿಂದ 40 ರೂ. ಇರುತ್ತಿತ್ತು. ಆದರೆ, ಇದೀಗ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತೆಂಗಿನಕಾಯಿ ಬೆಲೆ 70ರಿಂದ 80 ರೂ.ದಾಟಿದ್ದು, ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿದೆ.

ಒಂದೆಡೆ ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದ್ದು, ಇನ್ನೊಂದೆಡೆ ಸಾಮಾನ್ಯ ಜನರಿಗೆ ಹೊರೆಯಾಗಿದೆ. ತೆಂಗಿನಕಾಯಿ ಜೊತೆ ಕೊಬ್ಬರಿ, ಕೊಬ್ಬರಿ ಎಣ್ಣೆ, ಏಳನೀರು ದರದಲ್ಲೂ ಭಾರೀ ಏರಿಕೆಯಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಲೀಟರ್‍ಗೆ 310 ರೂ., ಆದರೆ ಏಳನೀರು ಒಂದಕ್ಕೆ 70ರೂ. ದಾಟಿದ್ದು ಹೊರೆಯಾಗಿದೆ ಎಂದು ಗ್ರಾಹಕರೊಬ್ಬರು ತಿಳಿಸಿದರು.

ಒಂದು ಕೆ.ಜಿ.ತೆಂಗಿನಕಾಯಿ ಬೆಲೆ 100 ರೂ.ಗಿಂತಲೂ ಅಧಿಕವಾಗುವ ಸಾಧ್ಯತೆಯಿದ್ದು, ಇನ್ನೂ 6 ತಿಂಗಳು ದರ ಇಳಿಕೆ ಸಾಧ್ಯತೆ ಇಲ್ಲ. ತೆಂಗಿನಕಾಯಿ ಇಳುವರಿಯಲ್ಲಿ ಕುಂಠಿತವಾಗಿದ್ದು, ತೆಂಗು ದುಬಾರಿಯಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News