×
Ad

ರಾಜ್ಯದೆಲ್ಲೆಡೆ ಮುಂದುವರಿಯಲಿದೆ ಚಳಿಯ ವಾತಾವರಣ : ಹವಾಮಾನ ಇಲಾಖೆ

ಬೀದರ್‌ನಲ್ಲಿ ಕನಿಷ್ಠ 7.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

Update: 2025-12-15 20:35 IST

ಸಾಂದರ್ಭಿಕ ಚಿತ್ರ | PC : PTI

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಮೈಕೊರೆಯುವ ಚಳಿ ಆರಂಭವಾಗಿದ್ದು, ಎರಡು ದಿನಗಳಿಂದ ನಗರದಲ್ಲಿ 14-15ಲಿ ಸೆಲ್ಸಿಯಸ್‍ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಮುಂದಿನ 3 ದಿನ ರಾಜ್ಯಾದ್ಯಂತ ಚಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆಗೆ ಆರೆಂಜ್ ಅಲರ್ಟ್, ಚಿಕ್ಕಮಗಳೂರು, ಗದಗ ಹಾಗೂ ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಡಿ.17ರ ನಂತರ ಚಳಿಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದ್ದು, ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರು ಆರೋಗ್ಯದೆಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮುಂಜಾನೆ ವಾಕಿಂಗ್ ಮತ್ತು ವ್ಯಾಯಾಮವನ್ನು ತಾತ್ಕಾಲಿಕವಾಗಿ ತಪ್ಪಿಸಿ, ಬೆಚ್ಚನೆಯ ಉಡುಪು ಧರಿಸಿ ಆದಷ್ಟು ಬಿಸಿ ಆಹಾರಗಳನ್ನು ಸೇವಿಸುವಂತೆ ಸೂಚನೆಗಳನ್ನು ನೀಡಿದ್ದಾರೆ.

ರಾಜ್ಯದಲ್ಲಿ ರವಿವಾರ ಬೀದರ್‌ನಲ್ಲಿ ಕನಿಷ್ಠ 7.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದ್ದು, ಹಾಸನದಲ್ಲಿ 8.7 ಡಿಗ್ರಿ ಸೆಲ್ಸಿಯಸ್ ಆಗುಂಬೆಯಲ್ಲಿ 9.3ಡಿಗ್ರಿ ಸೆಲ್ಸಿಯಸ್, ಧಾರವಾಡದಲ್ಲಿ 9.5 ಡಿಗ್ರಿಸೆಲ್ಸಿಯಸ್, ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್,ಹೊನ್ನಾವರದಲ್ಲಿ ಕನಿಷ್ಠ 19.13 ಡಿಗ್ರಿ ಸೆಲ್ಸಿಯಸ್ ಬೆಂಗಳೂರಿನ ಎಚ್‍ಎಎಲ್ ವ್ಯಾಪ್ತಿಯಲ್ಲಿ 13.4 ಡಿಗ್ರಿ ಸೆಲ್ಸಿಯಸ್ ಸೇರಿ ಇತರೆಡೆ ಸರಾಸರಿ 14.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಿ.13ರಂದು ತೆಲಂಗಾಣ ರಾಜ್ಯದ ಸಂಗರೆಡ್ಡಿಯಲ್ಲಿ ದಾಖಲೆಯ ಕನಿಷ್ಠ ತಾಪಮಾನ 5.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿ, ಹಳೆಯ ದಾಖಲೆ ಮುರಿದಿತ್ತು. ತಾಪಮಾನವು ಮತ್ತಷ್ಟು ಕುಸಿಯುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ಈಗಾಗಲೇ ತೆಲಂಗಾಣ ರಾಜ್ಯದ 20 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.

ತೆಲಂಗಾಣ ರಾಜ್ಯದ ಸಂಗರೆಡ್ಡಿ, ಮೇದಕ್, ಕಾಮರೆಡ್ಡಿ, ಆದಿಲಾಬಾದ್, ನಿರ್ಮಲ್, ಮಂಚೇರಿಯಲ್, ವಾರಂಗಲ್, ಹನುಮಕೊಂಡ, ಜನಗಾಂವ್, ಸಿದ್ದಿಪೇಟೆ ಮತ್ತು ಕೊಮರಂ ಭೀಮ್ ಆಸಿಫಾಬಾದ್‍ನ ಕೆಲವು ಭಾಗಗಳಲ್ಲಿ ಶೀತಗಾಳಿಯ ಪರಿಸ್ಥಿತಿ ಮತ್ತಷ್ಟು ತೀವ್ರವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News