×
Ad

"ಗ್ರೇಟರ್" ಬೆಂಗಳೂರು "ವಾಟರ್" ನಲ್ಲಿ ಮುಳುಗಿರುವಾಗ‌ ಕಾಂಗ್ರೆಸ್‌ "ಸಾಧನಾ ಸಮಾವೇಶ" ನಡೆಸುತ್ತಿದೆ: ಸುನಿಲ್‌ ಕುಮಾರ್

Update: 2025-05-19 10:59 IST

ಉಡುಪಿ: ರೋಮ್ ಗೆ ಬೆಂಕಿ ಬಿದ್ದಾಗ ಅಲ್ಲೊಬ್ಬ ಪಿಟೀಲು ಬಾರಿಸುತ್ತಿದ್ದನಂತೆ, ರಾಜಧಾನಿ ಬೆಂಗಳೂರು ಮಳೆಯಿಂದ ಮುಳುಗಿದಾಗ ಇಲ್ಲಿನ ಸರ್ಕಾರ " ಸಾಧನಾ ಸಮಾವೇಶ " ನಡೆಸುತ್ತಿದೆ ಎಂದು ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಟೀಕಿಸಿದ್ದಾರೆ. 

ಮೇ 20 ರಂದು ಹೊಸಪೇಟೆಯಲ್ಲಿ ನಡೆಯುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದ ಬಗ್ಗೆ ಎಕ್ಸ್‌ ಪೋಸ್ಟ್‌ ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಗ್ರೇಟರ್" ಬೆಂಗಳೂರು "ವಾಟರ್" ನಲ್ಲಿ ಮುಳುಗಿರುವಾಗ‌ ನಾಗರಿಕರ ಸಂಕಷ್ಟಕ್ಕೆ ನೆರವಾಗಬೇಕಿದ್ದ ಕಾಂಗ್ರೆಸ್ ಶಾಸಕರು, ಸಚಿವರು ಹೊಸಪೇಟೆಗೆ ದೌಡಾಯಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಬೆಂಗಳೂರಿನ ಜನರು ಕಷ್ಟದಲ್ಲಿರುವಾಗ ಈ ಸಂಭ್ರಮ ಬೇಕೇ ? ಈ ದುರಾಡಳಿತವನ್ನು ನಿಮ್ಮ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುತ್ತಾರೆಯೇ ? ಎಂದು ಪ್ರಶ್ನಿಸಿರುವ ಶಾಸಕ ಸುನಿಲ್‌ ಕುಮಾರ್‌, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಎರಡು ವರ್ಷದಲ್ಲಿ ವಿನಿಯೋಗಿಸಿದ ಹಣ ಎಷ್ಟು ಎಂದು ಮೊದಲು ಶ್ವೇತಪತ್ರ ಪ್ರಕಟಿಸಿ ಎಂದು ಆಗ್ರಹಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News