×
Ad

'ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ರಾಹುಲ್': ಅನಿಮೇಷನ್‌ ಬಿಡುಗಡೆ ಮಾಡಿದ ಕಾಂಗ್ರೆಸ್

Update: 2023-06-27 17:03 IST

ಬೆಂಗಳೂರು: ಮುಂಬರಲಿರುವ 2024 ರ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ವಿಪಕ್ಷ  ಕಾಂಗ್ರೆಸ್‌ ತನ್ನ ಡಿಜಿಟಲ್‌ ಪ್ರಚಾರಕ್ಕೆ ಚಾಲನೆ ನೀಡಿದೆ.

‘ಮೊಹಬ್ಬತ್ ಕಿ ದುಕಾನ್’ ಹೆಸರಿನಲ್ಲಿ ಅನಿಮೇಟೆಡ್‌ ವಿಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್,  ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವುದರ ಮೂಲಕ ರಾಹುಲ್‌ ಗಾಂಧಿ ಬಿಜೆಪಿ ಸೋಲಿಸಲಿದ್ದಾರೆ ಎಂದು ವಿಡಿಯೋ ಪ್ರತಿಪಾದಿಸಿದೆ.

ಈ ವಿಡಿಯೋ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್‌ @INCKarnataka, ''ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನಗಳ ಮೌಲ್ಯಗಳನ್ನು ಗಂಟುಮೂಟೆ ಕಟ್ಟಿ ದ್ವೇಷವನ್ನು ಬಿತ್ತಿ, ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಿರುವ ಬಿಜೆಪಿಯ ಪ್ರಯತ್ನಗಳನ್ನು ಪ್ರೀತಿ, ಸಹಬಾಳ್ವೆಯ ಸಂದೇಶಗಳ ಮೂಲಕ ರಾಹುಲ್‌ ಗಾಂಧಿ ಅವರು ಸೋಲಿಸಲಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ'' ಎಂದು ಟ್ವೀಟ್‌ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News