×
Ad

ʼಬಿಗ್ ಬಾಸ್ʼ ಮನೆಯಿಂದಲೇ ಸ್ಪರ್ಧಿಯ ಬಂಧನ

Update: 2023-10-23 10:34 IST

ವರ್ತೂರು ಸಂತೋಷ್ - ಬಂಧಿತ ಬಿಗ್‌ ಬಾಸ್‌ ಸ್ಪರ್ಧಿ

ಬೆಂಗಳೂರು: ಹುಲಿ ಉಗುರು ಇರುವ ಪೆಂಡೆಂಟ್‌ ಧರಿಸಿದ್ದ ಆರೋಪದಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡʼದ ಸ್ಪರ್ಧಿಯೊಬ್ಬರನ್ನು  ಅರಣ್ಯ ಇಲಾಖೆ ಪೊಲೀಸರು ಬಂಧಿಸಿರುವುದು ವರದಿಯಾಗಿದೆ. 

 ವರ್ತೂರು ಸಂತೋಷ್ ಬಂಧಿತ ಬಿಗ್ ಬಾಸ್ ಸ್ಪರ್ಧಿಯಾಗಿದ್ದು, ವನ್ಯಜೀವಿ ಕಾಯಿದೆ ಉಲ್ಲಂಘನೆ ಮಾಡಿದ್ದರಿಂದ ಅವರು ಬಂಧನಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ (ರವಿವಾರ) ರಾತ್ರಿ 8 ಗಂಟೆ ವೇಳೆ ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ರನ್ನು ಹೊರ ಕರೆತಂದಿರುವ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ಸದ್ಯ 10ನೇ ಆವೃತ್ತಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಮನೆಯಲ್ಲಿಯೇ ಬಂಧಿಸಿ ಕರೆದೊಯ್ಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News