×
Ad

ದಲಿತ ಮುಖಂಡ ಜಿಗಣಿ ಶಂಕರ್ ನಿಧನ

Update: 2023-08-25 09:30 IST

ಬೆಂಗಳೂರು, ಆ. 25: ದಲಿತ ಚಳುವಳಿ ಹಿರಿಯ ಮುಖಂಡ ಹಾಗೂ ಶೋಷಿತ ಸಮುದಾಯಗಳ ದ್ವನಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಜಿಗಣಿ ಶಂಕರ್ (67) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪತ್ನಿ, ಮೂವರು ಮಕ್ಕಳು ಸಹಿತ ಅಪಾರ ಸಂಖ್ಯೆಯ ಬಂಧು- ಮಿತ್ರರು ಹಾಗೂ ಹೋರಾಟದ ಒಡನಾಡಿಗಳನ್ನು ಅಗಲಿರುವ ಶಂಕರ್, ಬೆಂಗಳೂರು ಹೊರವಲಯದ ಜಿಗಣಿ ಮೂಲದವರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಶಂಕರ್, ದಲಿತ, ಶೋಷಿತ ಸಮುದಾಯದ ಹೋರಾಟಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದರು.

ಜಿಗಣಿ ಶಂಕರ್ ಅವರ ಅಂತ್ಯಕ್ರಿಯೆಯನ್ನು ಜಿಗಣಿಯಲ್ಲಿರುವ ಅವರ ತೋಟದಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಂಕರ್ ಅವರ ನಿಧನಕ್ಕೆ ದಲಿತ ಮುಖಂಡರು ಕಂಬನಿ ಮಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News