×
Ad

ನೀರುಪಾಲಾಗಿದ್ದ ಇಬ್ಬರು ಬಾಲಕರ ಮೃತದೇಹ ಪತ್ತೆ

Update: 2023-08-16 12:05 IST

ಗದಗ: ಜಿಲ್ಲೆಯ ರಹಮತ್ ನಗರದಲ್ಲಿ ಜಾನುವಾರು ತೊಳೆಯಲು ನದಿಗೆ ಇಳಿದಿದ್ದ ವೇಳೆ ನೀರುಪಾಲಾಗಿದ್ದ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. 

ಮೃತರನ್ನು 12 ವರ್ಷದ ಮೊಹಮ್ಮದ್ ಅಮಾನ್ ಮತ್ತು 14 ವರ್ಷದ ಸಂತೋಷ್ ಕುಂಬಾರ್ ಎಂದು ಗುರುತಿಸಲಾಗಿದೆ. ಇನ್ನು ಮಹಿಳೆ ಸೇರಿ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಮಧ್ಯಾಹ್ನ ಜಾನುವಾರು ತೊಳೆಯಲು ನದಿಗೆ ಇಳಿದಿದ್ದಇಬ್ಬರು ಬಾಲಕರು ನಾಪತ್ತೆಯಾಗಿದ್ದರು. ನಿನ್ನೆ ರಾತ್ರಿ ಬಾಲಕ ಸಂತೋಷ್ ಮೃತದೇಹ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಮೊಹಮ್ಮದ್ ಅಮಾನ್ ಮೃತದೇಹ ಪತ್ತೆಯಾಗಿದೆ. 

ನಾಪತ್ತೆಯಾಗಿದ್ದ ಇಬ್ಬರು ಬಾಲಕರಿಗಾಗಿ ನಿನ್ನೆಯಿಂದ ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News