×
Ad

ದೇವನಹಳ್ಳಿ: ಪತ್ನಿಯೊಂದಿಗೆ ಸೇರಿ ತಾಯಿಯನ್ನೇ ಹತ್ಯೆಗೈದ ಮಗ

Update: 2023-08-06 00:10 IST

ಸಾಂದರರ್ಭಿಕ ಚಿತ್ರ

ದೇವನಹಳ್ಳಿ: ಆಸ್ತಿಗಾಗಿ ಮಗನೇ ತಾಯಿಯನ್ನು ಕೊಲೆ ಮಾಡಿರುವ ಘಟನೆ ದೇವನಹಳ್ಳಿಯ ಉದಯಗಿರಿ ಸಮೀಪ ಶನಿವಾರ ವರದಿಯಾಗಿದೆ.

ಚಿನ್ನಮ್ಮ (60) ಮೃತ ಮಹಿಳೆಯಾಗಿದ್ದು, ಆರೋಪಿಗಳಾದ ರಾಘವೇಂದ್ರ ಹಾಗೂ ಆತನ ಪತ್ನಿ ಸುಧಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. 

ಆಸ್ತಿ ವಿಚಾರವಾಗಿ ರಾಘವೇಂದ್ರ ತಾಯಿ ಜೊತೆ ಹಲವು ದಿನಗಳಿಂದ ಜಗಳವಾಡುತ್ತಿದ್ದ ಎನ್ನಲಾಗಿದೆ. 

ಇಂದು ಬೆಳಗ್ಗೆ ಚಿನ್ನಮ್ಮ ಎಂದಿನಂತೆ  ಊರಿನ ಆಚೆ ಪೊರಕೆ ಕಡ್ಡಿ ಕಟಾವಿಗೆ ಹೋಗಿದ್ದಾರೆ. ಇದೇ ಸಂದರ್ಭ ಬಳಸಿಕೊಂಡ ರಾಘವೇಂದ್ರ ಮತ್ತು ಸುಧಾ ಚಿನ್ನಮ್ಮನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.  ನಿರ್ಜನ ಪ್ರದೇಶದಲ್ಲಿ ಕೆಲ ಕಾಲ ಚಿನ್ನಮ್ಮ ಜೊತೆ ಜಗಳವಾಡಿ ಕೊನೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಆ ಬಳಿಕ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಚಿನ್ನಮ್ಮ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ವಿಷಯ ತಿಳಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್​ ಠಾಣೆಯ ಸಿಬ್ಬಂದಿ ವೃದ್ಧೆ ಚಿನ್ನಮ್ಮನ ಮಗ ರಾಘವೇಂದ್ರ ಮತ್ತು ಸೊಸೆ ಸುಧಾಳನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News