×
Ad

ಡಿ.ಕೆ. ಶಿವಕುಮಾರ್ ಶೀಘ್ರದಲ್ಲೇ ಮಾಜಿ ಸಚಿವರಾಗಲಿದ್ದಾರೆ: ರಮೇಶ್ ಜಾರಕಿಹೊಳಿ

Update: 2023-10-30 15:40 IST

ಬೆಳಗಾವಿ: ʼಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಮಾಜಿ ಸಚಿವರಾಗಲಿದ್ದಾರೆʼ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼʼ ಡಿಕೆ ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದ್ದಾರೆ. 50, 100 ಕೋಟಿ ಎಂದು ಅಪಪ್ರಚಾರ ಮಾಡಲಾಗಿದೆ. 2019ರಲ್ಲಿ ಡಿಕೆಶಿ ಸೊಕ್ಕು, ದುರಾಡಳಿತದಿಂದ ನಾವೆಲ್ಲ ಪಕ್ಷಾಂತರ ಮಾಡಿದ್ದೇವೆ. ಆಪರೇಷನ್ ಕಮಲ ಎಲ್ಲವೂ ನಡೆಯುತ್ತಿಲ್ಲ ಎಲ್ಲವೂ ಸುಳ್ಳು. ಗ್ಯಾರಂಟಿ ಯೋಜನೆ ವಿಫಲ ಆಗಿದೆ. ಹೀಗಾಗಿ ಜನರ ದಿಕ್ಕು ಬದಲು ಮಾಡಲು ಈ ರೀತಿಯಲ್ಲಿ ಮಾಡುತ್ತಿದ್ದಾರೆʼʼ ಎಂದು ದೂರಿದರು.

ʼಕನಕಪುರದಲ್ಲಿ ನಡೆದ ಎಲ್ಲಾ ಚುನಾವಣೆ ಹೊಂದಾಣಿಕೆ ಆಗಿವೆ. ರಾಜ್ಯದಲ್ಲಿ ಆಪರೇಷನ್ ಕಮಲ ಎಲ್ಲವೂ ಸುಳ್ಳು. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯ ಯತ್ನ ಮಾಡಲಾಗುತ್ತಿದೆ. ಲಾಟರಿ ಮಂತ್ರಿ, ಶಾಸಕರು ಯಾವಾಗಲೂ ಅಪಾಯಕಾರಿʼ ಎಂದರು.

ಇನ್ನು ʼಬೆಳಗಾವಿ ರಾಜಕಾರಣ ಹಾಗೂ ಡಿಕೆಶಿಯಿಂದ ಸರಕಾರ ಬೀಳಲಿದೆʼ ಎಂದು ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News