×
Ad

ಡಿ.ಕೆ.ಶಿವಕುಮಾರ್ ಯಾವ ಕಾಲಕ್ಕೂ ಸಿಎಂ ಆಗಲ್ಲ: ಬಿಜೆಪಿ ಶಾಸಕ ಯತ್ನಾಳ್‌

Update: 2023-08-18 15:41 IST

ವಿಜಯಪುರ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ʼʼಮುಖ್ಯಮಂತ್ರಿ ಆಗಲ್ಲʼʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ. 

ಶುಕ್ರವಾರ ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼʼಡಿ.ಕೆ.ಶಿವಕುಮಾರ್ ಯಾವ ಕಾಲಕ್ಕೂ ಸಿಎಂ ಆಗಲ್ಲ. ಇದೀಗ ಡಿಕೆಶಿ ಸೂಪರ್ ಸಿಎಂ ಆಗಿದ್ದಾರೆʼʼ ಎಂದು ಆರೋಪಿಸಿದರು. 

ʼʼಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ. ಈಗ  ಅವರು ಸುಮ್ಮನೆ ಸಿಎಂ ಹುದ್ದೆಯಲ್ಲಿ ಇದ್ದಾರೆ. ಆದ್ರೇ, ಆಡಳಿತ ಮಾತ್ರ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಆರು ತಿಂಗಳು ಆಗ್ಲಿ, ಐದು ವರ್ಷ ಆಗ್ಲಿ ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಇರುತ್ತಾರೆʼʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News