×
Ad

ಟಿಡಿಪಿಯ ಮುಸ್ಲಿಂ ತುಷ್ಟೀಕರಣದ ಬಗ್ಗೆ ‌ಮಾತಾಡಲು ಬಿಜೆಪಿಗೆ ಬಾಯಿ ಇಲ್ಲವೇ?: ದಿನೇಶ್‌ ಗುಂಡೂರಾವ್

Update: 2024-06-08 10:02 IST

PC:fb

ಬೆಂಗಳೂರು: ಟಿಡಿಪಿಯ ಮುಸ್ಲಿಂ ತುಷ್ಟೀಕರಣ ರಾಜಕಾರಣದ ಬಗ್ಗೆ ‌ಮಾತಾಡಲು ಈಗ ಬಿಜೆಪಿಯವರಿಗೆ ಬಾಯಿ ಇಲ್ಲವೆ? ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

ಹಿಂದುಳಿದ ವರ್ಗಗಳ ಪೈಕಿ ಮುಸ್ಲಿಮರಿಗೆ ನೀಡಿರುವ ಶೇಕಡ 4ರಷ್ಟು ಮೀಸಲಾತಿಯನ್ನು ಮುಂದುವರಿಸಲು ತೆಲುಗುದೇಶಂ ಪಕ್ಷ ಬದ್ಧವಾಗಿದೆ ಎಂಬ ಟಿಡಿಪಿ ಯ ಪ್ರಧಾನ ಕಾರ್ಯದರ್ಶಿ ಮತ್ತು ಚಂದ್ರಬಾಬು ನಾಯ್ಡು ಪುತ್ರ ನರಾ ಲೋಕೇಶ್ ಅವರ ಹೇಳಿಕೆ ಬಗ್ಗೆ ಸಚಿವರು ಎಕ್ಸ್‌ ಪೋಸ್ಟ್‌ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಮಾಡುತ್ತದೆ ಎಂದು ಬಿಜೆಪಿಯವರು ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಎನ್‌ ಡಿಎ ಯ ಅತಿದೊಡ್ಡ ಮಿತ್ರ ಪಕ್ಷ ಟಿಡಿಪಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ 4% ರಷ್ಟು ಮೀಸಲಾತಿಯನ್ನು ಮುಸ್ಲಿಂರಿಗೆ ಮುಂದುವರೆಸುವುದಾಗಿ ಹೇಳಿದೆ‌. ಈಗ್ಯಾಕೆ ಬಿಜೆಪಿ ಯವರು ಟಿಡಿಪಿ ಯದ್ದು ಮುಸ್ಲಿಂ ತುಷ್ಟೀಕರಣ ಎಂದು ದೂರುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಮಿತ್ರಪಕ್ಷಗಳು ಕಡುಕಷ್ಟದಲ್ಲಿರುವ ಮುಸ್ಲಿಂ ಕುಟುಂಬಕ್ಕೆ ಸೌಲಭ್ಯ ಒದಗಿಸಿದರೆ ಅದು ಕಲ್ಯಾಣ ಕಾರ್ಯಕ್ರಮ. ಇದೇ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಅದು ಮುಸ್ಲಿಂ ತುಷ್ಟೀಕರಣ. ಈಗಲಾದರು ಬಿಜೆಪಿಯವರಿಗೆ ಜ್ಞಾನೋದಯವಾಗಿ ಎಲ್ಲಾ ಧರ್ಮದವರನ್ನು ಪ್ರೀತಿಸಿ ಮೂಲಭೂತವಾದವನ್ನು ತ್ಯಜಿಸಲಿ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News