ಡಾ.ಎ.ನಾರಾಯಣ ಅವರಿಗೆ ‘ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿʼ
Update: 2026-01-09 20:44 IST
ಡಾ.ಎ.ನಾರಾಯಣ
ಬೆಂಗಳೂರು : ರಾಜ್ಯ ಮಾಧ್ಯಮ ಅಕಾಡಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಿದ್ದು, ʼಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿʼಗೆ ಖ್ಯಾತ ಅಂಕಣಕಾರ, ಚಿಂತಕ ಡಾ.ಎ.ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ.ಎ.ನಾರಾಯಣ ಅವರು ಬೆಂಗಳೂರಿನ ಅಝೀಮ್ ಪ್ರೇಮ್ ಜಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದು ಅಂಕಣಕಾರ ಹಾಗು ವಿಶ್ಲೇಷಕರಾಗಿ ಅಪಾರ ಓದುಗರು ಹಾಗು ವೀಕ್ಷಕರನ್ನು ಪಡೆದವರು. ಅವರ ರಾಜಕೀಯ ವಿಶ್ಲೇಷಣೆಗಳು ವ್ಯಾಪಕವಾಗಿ ಚರ್ಚೆಯಾಗುತ್ತವೆ.
ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ 30 ಪತ್ರಕರ್ತರು, ವಿವಿಧ ದತ್ತಿ ಪ್ರಶಸ್ತಿಗಳಿಗೆ 10 ಮಂದಿ ಹಾಗೂ 2025ನೇ ಸಾಲಿನ ವಿಶೇಷ ಪ್ರಶಸ್ತಿಗೆ ಸರಿತಾ ರೈ ಅವರನ್ನು ಆಯ್ಕೆ ಮಾಡಲಾಗಿದೆ.