×
Ad

ಅರಕಲಗೂಡು | ಭೂಮಿ ಕಂಪಿಸಿದ ಅನುಭವ: ಮನೆಯಿಂದ ಹೊರಗೆ ಓಡಿ ಹೋದ ಜನ

Update: 2023-06-27 18:34 IST

ಅರಕಲಗೂಡು: ಜೂ. 27 : ತಾಲೂಕಿನ ವಿವಿಧೆಡೆ ಇಂದು (ಮಂಗಳವಾರ) ಬೆಳಗ್ಗೆ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಹೊರಬಂದ ಘಟನೆ ವರದಿಯಾಗಿದೆ. 

ಪಟ್ಟಣದಲ್ಲಿ ಬೆಳಗ್ಗೆ ಕೆಲವು ಕಡೆ 10: 25 ಇನ್ನೂ ಕೆಲವು ಕಡೆ 10.34 ರ ಸಮಯದಲ್ಲಿ ಭೂಮಿ ಕಂಪಿಸಿದೆ. ಜನರಿಗೆ ಭೂಕಂಪನದ ಅನುಭವವಾಗಿದ್ದು ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ಭೂಕಂಪನದ ಅನುಭವದಿಂದ ಮನೆಯ ಹೊರಗಡೆಯೇ ಸ್ಥಳೀಯರು ನಿಂತಿದ್ದಾರೆ.

ಯಾವ ಕಾರಣಕ್ಕೆ ಭೂಮಿ ಕಂಪಿಸಿದೆ ಎಂದು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಶಾಸಕ ಎ. ಮಂಜು ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News