×
Ad

'ಶಕ್ತಿ' ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಬಲ, ಬಿಜೆಪಿಗರ ಅಪಪ್ರಚಾರಕ್ಕೆ ಉತ್ತರ: ಕಾಂಗ್ರೆಸ್

Update: 2023-07-23 17:27 IST

ಫೈಲ್ ಚಿತ್ರ

ಬೆಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಸಿಕ್ಕಿದೆ, ದೇವಾಲಯಗಳ ಆದಾಯಕ್ಕೆ ಬೆಂಬಲ ಸಿಕ್ಕಿದೆ, ಜನರ ಭಕ್ತಿಗೆ ಪುಷ್ಠಿ ಸಿಕ್ಕಿದೆ ಎಂದು ಕಾಂಗ್ರೆಸ್ ವಿಶ್ಲೇಷಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಆರ್ಥಿಕತೆಯ ಚಲನಶೀಲತೆಯ ಬಗ್ಗೆ ಅರಿವಿಲ್ಲದ ಬಿಜೆಪಿಗರ “ಪಾಕಿಸ್ತಾನ, ಶ್ರೀಲಂಕಾ“ ಎಂಬ ಅಪಪ್ರಚಾರಕ್ಕೆ ಉತ್ತರವೂ ಸಿಕ್ಕಿದೆ'' ಎಂದು ತಿರುಗೇಟು ನೀಡಿದೆ. 

''ಎಷ್ಟೋ ದಿನಗಳಿಂದ ತಮ್ಮ ನೆಚ್ಚಿನ ದೇವಾಲಯಗಳ ಭೇಟಿಗೆ ಕಾತರಿಸುತ್ತಿದ್ದ ಜನ ಶಕ್ತಿ ಯೋಜನೆಯ ಲಾಭ ಪಡೆದು ದೇವರ ದರ್ಶನ ಪಡೆಯುತ್ತಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಹೇಳುವಂತೆ ನಮ್ಮ ಸರ್ಕಾರಕ್ಕೆ ಜನತೆ ಹರಿಸುತ್ತಿದ್ದಾರೆ'' ಕಾಂಗ್ರೆಸ್ ಹೇಳಿದೆ. 

''ಜನರ ಧಾರ್ಮಿಕ ನಂಬಿಕೆಗಳಿಗೆ ಉತ್ತೇಜಿಸಿದ ಸಾರ್ಥಕತೆ ನಮಗಿದೆ, ಆದರೆ ಸೋಕಾಲ್ಡ್ ಧರ್ಮ ರಕ್ಷಕರಾದ ಬಿಜೆಪಿಗರು ಮಾಡಿದ್ದೇನು ಎನ್ನುವುದನ್ನು ಉತ್ತರಿಸಬಲ್ಲರೇ?'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News