×
Ad

ಹಿಂದುಳಿದ ವರ್ಗಗಳ ಆಯೋಗದ ಅವಧಿ ಒಂದು ತಿಂಗಳು ವಿಸ್ತರಣೆ ; ರಾಜ್ಯ ಸರಕಾರದ ಆದೇಶ

Update: 2024-01-31 18:40 IST

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಪ್ರಸಕ್ತ ಸಾಲಿನ ಫೆ.29 ರವರೆಗೆ  ಮುಂದುವರಿಸಿ ರಾಜ್ಯ ಸರಕಾರ ಆದೇಶಿಸಿದೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯರನ್ನಾಗಿ ಶಿವಮೊಗ್ಗ ಜಿಲ್ಲೆಯ ಕಲ್ಯಾಣ ಕುಮಾರ್ ಎಚ್.ಎಸ್., ಬೆಂಗಳೂರಿನ ರಾಜಶೇಖರ್ ಬಿ.ಎಸ್., ಉಡುಪಿ ಜಿಲ್ಲೆಯ ಅರುಣ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಕೆ.ಟಿ.ಸುವರ್ಣ ಹಾಗೂ ಬೆಂಗಳೂರಿನ ಶಾರದಾ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಹೇಮಲತಾ ಎಂ. ಅಧಿಸೂಚನೆ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News