×
Ad

ಖ್ಯಾತ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ಹೃದಯಾಘಾತದಿಂದ ನಿಧನ

Update: 2023-09-08 17:06 IST

ಅಜಿತ್ ನಿನನ್

ಮೈಸೂರು,ಸೆ.8: ಖ್ಯಾತ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ (68) ಶುಕ್ರವಾರ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. 

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಹೈದರಾಬಾದಿನಲ್ಲಿ ಜನಿಸಿದ ಅವರು, ಚೆನ್ನೈನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದ ನಂತರ ವ್ಯಂಗ್ಯಚಿತ್ರಕಾರರಾದರು.

ಇಂಡಿಯಾ ಟುಡೆ, ಔಟ್ ಲುಕ್, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಕಾರರಾಗಿ ದುಡಿದರು.. ಇಂಡಿಯಾ ಟುಡೆ ಪತ್ರಿಕೆ ಬಳಗದ 'ಟಾರ್ಗೆಟ್' ಎಂಬ ಮಕ್ಕಳ ಪತ್ರಿಕೆಗೆ 'ಡಿಟೆಕ್ಟಿವ್‌ ಮೂಚುವಾಲಾ' ಎಂಬ ಸರಣಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದರು.

ಬಳಿಕ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನಿತ್ಯ ವ್ಯಂಗ್ಯಚಿತ್ರ ಬರೆಯುತ್ತಿದ್ದರು. ದೆಹಲಿಯಲ್ಲಿದ್ದ ಅವರು, ಎರಡು ವರ್ಷಗಳ ಹಿಂದೆ ನಗರದ ಕೆಆರ್ ಎಸ್ ರಸ್ತೆಯ ಬ್ರಿಗೇಡ್ ಸಿಂಫೋನಿ ಅಪಾಟ್೯ಮೆಂಟ್ ನ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು.

ಅವರ ಅಂತ್ಯಕ್ರಿಯೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ರವಿವಾರ (ಸೆಪ್ಟೆಂಬರ್ 10) ಮಧ್ಯಾಹ್ನ ಒಂದು ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News