×
Ad

ರಸ್ತೆ ಅಪಘಾತದಲ್ಲಿ ತಂದೆ-ಮಗ ಮೃತ್ಯು

Update: 2023-08-07 18:43 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.7: ಮದ್ಯ ಕುಡಿದ ಯುವಕರ ಗುಂಪೊಂದು ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಿಂದ ತಂದೆ-ಮಗ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಸದಾಶಿವನಗರದ ರಾಮಯ್ಯ ಆಸ್ಪತ್ರೆ ಮುಂಭಾಗದ ಇಸ್ರೋ ಸರ್ಕಲ್‍ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಕುವೆಂಪು ನಗರದ ರಘು (65) ಹಾಗೂ ಅವರ ಪುತ್ರ ಚಿರಂಜೀವಿ (25), ಮೃತಪಟ್ಟವರು, ಗಾಯಗೊಂಡಿರುವ ವಾಸು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಕಾರಣವಾದವರ ವಿರುದ್ಧ ಸದಾಶಿವ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಕೋರಮಂಗಲದಲ್ಲ ಪುಸ್ತಕ ಮಾರಾಟ ಅಂಗಡಿ ನಡೆಸುತ್ತಿದ್ದ ತಂದೆ ಮಗ ಇಬ್ಬರು ಆ.6ರ ರಾತ್ರಿ 11.30ಕ್ಕೆ ಅಂಗಡಿಯ ಬಾಗಿಲು ಹಾಕಿಕೊಂಡು ಮನೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಮೃತ ತಂದೆ ವಾಸು, ಪುತ್ರ ಚಿರಂಜೀವಿ ಹಾಗೂ ಗಾಯಗೊಂಡಿರುವ ವಾಸು ಮೂವರು ಇಸ್ರೋ ಸರ್ಕಲ್ ಬಳಿ ಹೋಗುತ್ತಿದ್ದ ಸಂದರ್ಭ ಹಿಂಬದಿಯಿಂದ ಮದ್ಯ ಕುಡಿದ ಗುಂಪೊಂದು ಇಕೋ ಕಾರಿನಲ್ಲಿ ಅತಿವೇಗವಾಗಿ ಬಂದಿದೆ.

ಮೊದಲು ಆಟೋಗೆ ಕಾರು ಢಿಕ್ಕಿ ಹೊಡೆದು ಆಟೋ ಪಲ್ಟಿಯಾಗಿದೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೆ ವೇಗವಾಗಿ ಹೋಗಲು ಯತ್ನಿಸುವ ವೇಳೆ ಮುಂದೆ ಎರಡು ಕಾರು ನಿಲ್ಲಿಸಿದ್ದು, ಅವುಗಳನ್ನು ತಪ್ಪಿಸಲು ಹೋಗಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವಾಸುಗೆ ಢಿಕ್ಕಿ ಹೊಡೆದು ಬಳಿಕ ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಜಖಂಗೊಂಡು ಅದರಲ್ಲಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ ಎಂದು ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News