×
Ad

ಕಳೆದು ಹೋದ ಪಾಸ್‍ಪೋರ್ಟ್ ಮತ್ತೆ ಪಡೆಯಲು ಎಫ್‍ಐಆರ್ ಕಡ್ಡಾಯ: ಹೈಕೋರ್ಟ್

Update: 2023-07-09 21:46 IST

ಬೆಂಗಳೂರು: ಕಳೆದು ಹೋದ ಪಾಸ್‍ಪೋರ್ಟ್ ಅನ್ನು ಮತ್ತೆ ಪಡೆಯಲು ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಎಫ್‍ಐಆರ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಪಾಸ್‍ಪೋರ್ಟ್ ಮರು ವಿತರಿಸಲು ಪ್ರಾದೇಶಿಕ ಪಾಸ್‍ಪೋರ್ಟ್ ಅಧಿಕಾರಿಗೆ(ಆರ್‍ಪಿಒ) ಸೂಚನೆ ನೀಡಲು ಕೋರಿ ಬೆಂಗಳೂರಿನ ಇಟ್ಟಮಡು ನಿವಾಸಿ ಶ್ರೀಧರ ಕುಲಕರ್ಣಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ಬಾಕಿಯಿದ್ದು, ಈ ನಡುವೆ 2023ರ ಜೂನ್ 14ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿದಾರರ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಈ ಮಧ್ಯೆ, ತಮ್ಮ ಪಾಸ್‍ಪೋರ್ಟ್ ಕಳೆದುಹೋಗಿರುವ ಹಿನ್ನೆಲೆಯಲ್ಲಿ ಡೂಪ್ಲಿಕೇಟ್ ಪಾಸ್‍ಪೋರ್ಟ್ ವಿತರಿಸುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಆರ್‍ಪಿಒ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News