×
Ad

ಹಾಸನ: ಮಗುವನ್ನು ಸಾಕಲು ಸಾಧ್ಯವಾಗದೇ ಮಾರಾಟಕ್ಕೆ ಯತ್ನ; ತಾಯಿ ಸೇರಿ ಐವರ ಬಂಧನ

Update: 2024-01-04 21:10 IST

ಸಾಂದರ್ಭಿಕ ಚಿತ್ರ (PTI)

ಹಾಸನ: ಮಗುವನ್ನು ಸಾಕಲು ಸಾಧ್ಯವಾಗದೇ ಮಾರಾಟ ಮಾಡಲು ಯತ್ನಿಸಿದ, ತಾಯಿ ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನವರಿ 3 ರಂದು ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜು ನೀಡಿರುವ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಮಗು ಸಾಗಣೆ ಮತ್ತು ಮಾರಾಟ ನಡೆದಿರುವ ಬಗ್ಗೆ ಸತ್ಯಾಂಶ ಹೊರ ಬಂದಿದೆ. ಆರೋಪಿಗಳಾದ ಸುಬ್ರಹ್ಮಣ್ಯ, ಶ್ರೀಕಾಂತ್ ಎಂಬವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗಿರಿಜ ಎಂಬವರ ಮಗುವನ್ನು ಚಿಕ್ಕಮಗಳೂರು ಮೂಲದ ಮಹಿಳೆಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಅದರ ಅನ್ವಯ ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಪ್ರಕರಣದಲ್ಲಿ ಈ ವರೆಗೆ ಯಾವುದೇ ಹಣದ ವಹಿವಾಟು ಕಂಡು ಬಂದಿಲ್ಲ, ಈಗಾಗಲೇ ಈ ಪ್ರಕರಣದ ಪೈಕಿ 5 ಜನರನ್ನು ಬಂಧನ ಮಾಡಲಾಗಿದ್ದು ತನಿಖೆ ಆರಂಭಿಸಿದ್ದೇವೆ ಜೊತೆಗೆ ಆಶಾ ಕಾರ್ಯಕರ್ತೆಯೊಬ್ಬರು ಕೂಡ ಈ ಪ್ರಕರಣದಲ್ಲಿ ಬಾಗಿ ಆಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News