ಮಾಜಿ ಸಿಎಂ ದಿ. ವೀರೇಂದ್ರ ಪಾಟೀಲ್ ಅವರ ಪತ್ನಿ ನಿಧನ: ಚಿಂಚೋಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
Update: 2023-09-27 12:04 IST
ಕಲಬುರಗಿ: ಕರ್ನಾಟಕ ರಾಜ್ಯದಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಅವರ ಪತ್ನಿ ಶಾರದಾ ಪಾಟೀಲ್ (97) ಮಂಗಳವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದು, ಬುಧವಾರ ಪಾರ್ಥಿವ ಶರೀರ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣಕ್ಕೆ ತರಲಾಯಿತು.
ಬೆಳಗ್ಗೆ ಚಿಂಚೋಳಿಯ ಸ್ವಗೃಹದಲ್ಲಿ ಹಲವು ವಿಧಿ ವಿಧಾನ ನೆರವೇರಿಸದ ಬಳಿಕ ಪಾರ್ಥಿವ ಶರೀರವನ್ನು ವೀರೇಂದ್ರ ಪಾಟೀಲ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.
ಪುತ್ರ, ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಪರಿವಾರ, ಕಾಂಗ್ರೆಸ್ ಮುಖಂಡರಾದ ಸುಭಾಷ್ ರಾಠೋಡ, ಬಾಬುರಾವ್ ಪಾಟೀಲ್, ಅನೀಲಕುಮಾರ ದೇವೀಂದ್ರಪ್ಪ ಜಮಾದಾರ, ರಾಜು ನಿಂಗದಳ್ಳಿ, ಶರಣು ಪಾಟೀಲ್, ಮಹಿಮೂದ ಪಟೇಲ್, ಬಸವರಾಜ ಮಾಲಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಇದ್ದರು.