×
Ad

ಜಂಬೂಸವಾರಿಗೂ ಮುನ್ನ ದರ್ಗಾಕ್ಕೆ ಭೇಟಿ ನೀಡಿದ ʻಅಭಿಮನ್ಯುʻ ನೇತೃತ್ವದ ಗಜ ಪಡೆ

Update: 2023-10-24 14:32 IST
ಗಜ ಪಡೆ- ಸಂಗ್ರಹ ಚಿತ್ರ

ಮೈಸೂರು: ನಾಡಿನ ಪರಂಪರೆ ಸೌಹಾರ್ದ ಸಾರುವ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ದಿನವಾದ ಸೋಮವಾರ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳು ಇಮಾಮ್ ಶಾ ವಲೀ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿವೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಸರಾ ಆನೆ ಅನಾರೋಗ್ಯಕ್ಕೀಡಾಗಿತ್ತು. ಆ ಸಂದರ್ಭದಲ್ಲಿ ಇಮಾಮ್ ಶಾ ವಲೀ ದರ್ಗಾಕ್ಕೆ ಹೋಗಿ ಆಶೀರ್ವಾದ ಪಡೆದ ನಂತರ ಕಾಯಿಲೆ ವಾಸಿಯಾಗಿತ್ತು.‌ಅಂದಿನಿಂದಲೂ ಈ ದರ್ಗಾಕ್ಕೆ ದಸರಾ ಆನೆಗಳು ಭೇಟಿ ನೀಡಿ ಆಶೀರ್ವಾದ ಪಡೆಯುತ್ತವೆ ಎಂದು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬ್ ಉಲ್ಲಾ ಷಾ ಖಾದ್ರಿ ತಿಳಿಸಿದರು.

ಅದರಂತೆ ಸೋಮವಾರ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ತಂಡ ಸೋಮವಾರ ಚಾಮರಾಜ ಮೊಹಲ್ಲಾದಲ್ಲಿರುವ ಇಮಾಮ್ ಶಾ ವಲೀ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಸೊಂಡಿಲೆತ್ತಿ ನಮಸ್ಕರಿಸಿ ವಾಪಸ್ ಬಂದಿವೆ.

ದಸರಾ ಆನೆಗಳು ಆರೋಗ್ಯದಿಂದ ಇದ್ದು ದಸರಾ ಯಶಸ್ವಿಗೊಳಿಸಲಿ ಎಂದು ಜಂಬೂ ಸವಾರಿ ಹಿಂದಿನ‌ ದಿನ ಪ್ರತೀತಿಯಂತೆ ಆನೆಗಳನ್ನು ಇಮಾಮ್ ಶಾ ವಲೀ ದರ್ಗಾಕ್ಕೆ ಕರೆ ತರಲಾಗುತ್ತದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News