×
Ad

ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಸೆಕ್ಯೂರಿಟಿ ಗಾರ್ಡ್‍ಗೆ ಜೈಲು ಶಿಕ್ಷೆ

Update: 2023-10-14 19:04 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.14: ಅಪ್ರಾಪ್ತ ಬಾಲಕಿ ಗಲ್ಲಕ್ಕೆ ಮುತ್ತುಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ ಸೆಕ್ಯೂರಿಟಿ ಗಾರ್ಡ್‍ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್‍ಟಿಎಸ್‍ಸಿ-1ನೆ ನ್ಯಾಯಾಲಯ ತೀರ್ಪು ನೀಡಿದೆ.

ಮಲ್ಲೇಶ್ವರದ ಚಿದಾನಂದ(35) ಅಪರಾಧಿ. ಮೂರು ವರ್ಷ ಜೈಲು, 25 ಸಾವಿರ ರೂ. ದಂಡ ಮತ್ತು ನೊಂದ ಬಾಲಕಿಗೆ ಡಿಎಸ್‍ಎಸ್‍ಎನಿಂದ 25 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾ.ಕೆ.ಎನ್.ರೂಪಾ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು. 2022ರ ಮೇ 22ರಂದು ಮಲ್ಲೇಶ್ವರದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಏಳು ವರ್ಷದ ಬಾಲಕಿ ತನ್ನ ಪಾಲಕರೊಂದಿಗೆ ಹೋಗಿದ್ದಳು.

ನೆಲಮಹಡಿಯಲ್ಲಿ ಬಾಲಕಿ ಆಟವಾಡುತ್ತಿದ್ದಾಗ ಅಪರಾಧಿ, ಮಗುವಿನ ಗಲ್ಲಕ್ಕೆ ಮುತ್ತುಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ. ನೊಂದ ಬಾಲಕಿಯ ತಂದೆ ಮಲ್ಲೇಶ್ವರ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿ ಚಂದ್ರಶೇಖರ್, ಚಿದಾನಂದನನ್ನು ಬಂಧಿಸಿ ಕೋರ್ಟ್‍ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಕೀಲರ ವಾದ ಆಲಿಸಿದ ನ್ಯಾಯಾಲಯ, ಚಿದಾನಂದನನ್ನು ಅಪರಾಧಿ ಎಂದು ಘೋಷಣೆ ಮಾಡಿ ತೀರ್ಪು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News