×
Ad

ಮಲ್ಟಿಫ್ಲೆಕ್ಸ್‌ ಸೇರಿದಂತೆ ಎಲ್ಲ ಚಿತ್ರ ಮಂದಿರಗಳಲ್ಲಿಯೂ ಗರಿಷ್ಠ ದರ 200 ರೂ. ನಿಗದಿಪಡಿಸಿ ಸರಕಾರದಿಂದ ಆದೇಶ

Update: 2025-07-15 22:06 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಮಲ್ಟಿಫ್ಲೆಕ್ಸ್‌ಗಳಲ್ಲಿ ದುಬಾರಿ ಮೊತ್ತದ ಸಿನೆಮಾ ಟಿಕೆಟ್‌ ದರಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದ್ದು, ಮಲ್ಟಿಫ್ಲೆಕ್ಸ್‌ ಸೇರಿದಂತೆ ಎಲ್ಲ ಚಿತ್ರ ಮಂದಿರಗಳಲ್ಲಿಯೂ ಗರಿಷ್ಠ ದರ 200 ರೂಪಾಯಿ ನಿಗದಿ ಮಾಡಿ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ಸಿನಿಮಾ ಮಂದಿರ ಹಾಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರವು ಮನೋರಂಜನಾ ತೆರಿಗೆ ಸೇರಿ 200 ರೂ.ಗಳನ್ನು ಗಡಿದಾಟುವಂತಿಲ್ಲ. ಈ ದರವು ಕನ್ನಡ ಮಾತ್ರವಲ್ಲದೇ, ರಾಜ್ಯದಲ್ಲಿ ಬಿಡುಗಡೆಯಾಗುವ ಅನ್ಯ ಭಾಷೆಯ ಎಲ್ಲ ಚಿತ್ರಗಳಿಗೂ ಅನ್ವಯವಾಗತ್ತದೆ ಎಂದು ತಿಳಿಸಲಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚಿತ್ರಮಂದಿರಗಳೇ ಕಡಿಮೆಯಾಗುತ್ತಿದ್ದು, ಮಲ್ಟಿಫ್ಲೆಕ್ಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನೆಮಾ ಟಿಕೆಟ್‌ ದರ ಬಹಳ ದುಬಾರಿಯಾಗುತ್ತಿದ್ದು, ಸಿನಿಮಾ ಪ್ರೇಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿತ್ತು. ಸದ್ಯ ಗರಿಷ್ಠ ಟಿಕೆಟ್‌ ದರ ನಿಗದಿ ಮಾಡಿದ್ದು, ಪ್ರೇಕ್ಷಕರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News