×
Ad

ಚೈತ್ರಾ ಕುಂದಾಪುರ ವಿರುದ್ಧದ ವಂಚನೆ ಪ್ರಕರಣ: ಹಣ ಬಿಡುಗಡೆ ಕೋರಿ ಗೋವಿಂದಬಾಬು ಪೂಜಾರಿ ಅರ್ಜಿ

Update: 2025-07-18 22:42 IST

ಚೈತ್ರಾ ಕುಂದಾಪುರ (Photo credit: facebook/Chaithrakundapurafanz)

ಬೆಂಗಳೂರು: ಚೈತ್ರಾ ಕುಂದಾಪುರ, ಅಭಿನವಶ್ರೀ ಹಾಲವೀರಪ್ಪಜ್ಜ ಮತ್ತಿತರ ವಿರುದ್ಧ ದಾಖಲಾದ 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಹಣ ಬಿಡುಗಡೆ ಕೋರಿ ದೂರುದಾರ ಉದ್ಯಮಿ ಗೋವಿಂದಬಾಬು ಪೂಜಾರಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ದೂರುದಾರರ ಪರ ಹಿರಿಯ ವಕೀಲ ಚಂದ್ರಮೌಳಿ, ನಮ್ಮ ಹಣ ಬಿಡುಗಡೆ ಕೋರಿದ್ದ ಅರ್ಜಿ ವಜಾಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಣ ಪಡೆದಿದ್ದರು. ಚೈತ್ರಾ ಕುಂದಾಪುರ ಅವರೀಗ ಬಿಗ್ ಬಾಸ್ ಸೆಲೆಬ್ರಿಟಿ. ಪೊಲೀಸರು ವಶಕ್ಕೆ ಪಡೆದಿರುವ ಹಣ ನಮಗೆ ಮರಳಿಸಬೇಕು ಎಂದು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News