×
Ad

ಜನರ ಕಿವಿ ಮೇಲೆ ಹೂವಿಟ್ಟ ಸರಕಾರ, ಈಗ ಗುತ್ತಿಗೆದಾರರ ಕಿವಿ ಮೇಲೆ ʼಲಾಲ್ ಬಾಗ್ʼ ಅನ್ನೇ ಇಟ್ಟು ತಮಾಷೆ ನೋಡುತ್ತಿದೆ: ಬಿಜೆಪಿ ಟೀಕೆ

Update: 2023-08-16 13:13 IST

ಬೆಂಗಳೂರು:  ʼರಾಜ್ಯದ ಜನರ ಕಿವಿ ಮೇಲೆ ಹೂವಿಟ್ಟ ಸಿದ್ದರಾಮಯ್ಯರವರ ಸರ್ಕಾರ, ಇದೀಗ ಗುತ್ತಿಗೆದಾರರ ಕಿವಿ ಮೇಲೆ ಲಾಲ್ ಬಾಗ್ ಅನ್ನೇ ಇಟ್ಟು ತಮಾಷೆ ನೋಡುತ್ತಿದೆʼ ಎಂದು ಬಿಜೆಪಿ ಟೀಕಿಸಿದೆ. 

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ʼʼಕ್ಷೇತ್ರಗಳಿಗೆ ಅನುದಾನವನ್ನೂ ನೀಡದೆ, ಅಭಿವೃದ್ಧಿ ಯೋಜನೆಗಳನ್ನೂ ಕೈಗೊಳ್ಳದೆ, ಗುತ್ತಿಗೆದಾರರ ಬಾಕಿ ಹಣವನ್ನೂ ಕೊಡದೆ, ಕಾಂಗ್ರೆಸ್ ಮೊಂಡಾಟ, ಕಳ್ಳಾಟಗಳನ್ನು ಆಡುತ್ತಿದೆ. ಗುತ್ತಿಗೆದಾರರ ಬಾಕಿ ಹಣವನ್ನು ಒತ್ತೆ ಇಟ್ಟುಕೊಂಡ #ATMSarkara ಬ್ಲ್ಯಾಕ್ ಮೇಲ್ ಮಾಡುತ್ತಿದೆ. ಕಲೆಕ್ಷನ್ ಮಾಡಿ ಕಮಿಷನ್ ಕೊಟ್ಟರೆ ಮಾತ್ರ ಬಿಲ್‌ಗೆ ಪರ್ಮಿಷನ್ ಸಿಗಲಿದೆʼʼ ಎಂದು ದೂರಿದೆ. 

ʼʼಹಿಂದೆಂದೂ ಕೇಳರಿಯದ ರೀತಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಪ್ರವೇಶಕ್ಕೇ ನಿರ್ಬಂಧ ಇರಬೇಕಾದ ಕಲೆಕ್ಷನ್ ಏಜೆಂಟರಿಗೆ ಕಾಂಗ್ರೆಸ್ಕ ಚೇರಿಯಲ್ಲೇ ಕುರ್ಚಿ ಮಾತ್ರವಲ್ಲ, ಕೊಠಡಿಯೂ ನೀಡಿ ಸಾಕುತ್ತಿದೆ. ಖಾಲಿ ಹುದ್ದೆಗಳಿಗೆ ನೇಮಕಾತಿಗಳನ್ನೂ ಮಾಡದೆ‌ #ATMSarkara ಲಂಚವನ್ನೇ ಅಧಿಕೃತಗೊಳಿಸುತ್ತಿದೆʼʼ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News