×
Ad

ನಾವು ಸಂವಿಧಾನ ಹಿಡಿದು ಓಡಾಡುತ್ತೇವೆ, ಧೈರ್ಯವಿದ್ದರೆ ಮನುಸ್ಮೃತಿ ಹಿಡಿದು ಓಡಾಡಿ : ಕೇಂದ್ರ ಸಚಿವ ಜೋಶಿಗೆ ಬಿ.ಕೆ.ಹರಿಪ್ರಸಾದ್‌ ಸವಾಲು

Update: 2024-12-30 12:50 IST

ಬಿ.ಕೆ.ಹರಿಪ್ರಸಾದ್/ಪ್ರಹ್ಲಾದ್‌ ಜೋಶಿ

ಬೆಂಗಳೂರು : "ನಾವು ಸಂವಿಧಾನ ಹಿಡಿದು ಓಡಾಡುತ್ತೇವೆ, ನಿಮಗೆ ಧೈರ್ಯ ಇದ್ದರೆ ಬಹಿರಂಗವಾಗಿ ಮನುಸ್ಮೃತಿ ಹಿಡಿದು ಓಡಾಡಿ" ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಬಿ.ಕೆ.ಹರಿಪ್ರಸಾದ್‌ ಸವಾಲು ಹಾಕಿದ್ದಾರೆ.

"ಕೈಯಲ್ಲಿ ಸಂವಿಧಾನ ಹಿಡಿದು ಓಡಾಡುವ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ದೇಶದ್ರೋಹದ ಕೃತ್ಯ. ದೇಶದ ಜನ ಕಾಂಗ್ರೆಸ್ ಪಕ್ಷದ ಇಂತಹ ನಿಲುವುಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ" ಎಂದು ʼಎಕ್ಸ್ʼ ನಲ್ಲಿ ಪ್ರಹ್ಲಾದ್ ಜೋಷಿ ಬರೆದುಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌, " ಪ್ರಹ್ಲಾದ್‌ ಜೋಶಿ ಅವರೇ ಸಂವಿಧಾನ ಹಿಡಿದು ಓಡಾಡುವುದು ನಿಮಗೆ ದೇಶದ್ರೋಹ ಆಗುವುದಾದರೆ ನಮಗೆ ಅದುವೇ ದೇಶಪ್ರೇಮ. ಸಂವಿಧಾನ, ತ್ರಿವರ್ಣ ಧ್ವಜದ ಬಗ್ಗೆ ನಿಮ್ಮ ದ್ವೇಷ,ತಾತ್ಸಾರ-ಮನುಸ್ಮೃತಿಯ ಮೇಲೆ ಆಂತರ್ಯದ ಪ್ರೀತಿ. ನಾವು ಸಂವಿಧಾನ ಹಿಡಿದು ಓಡಾಡುತ್ತೇವೆ, ಧೈರ್ಯ ಇದ್ದರೆ ಬಹಿರಂಗವಾಗಿ ಮನುಸ್ಮೃತಿ ಹಿಡಿದು ಓಡಾಡಿ" ಎಂದು ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News