×
Ad

ಬಿಜೆಪಿಗರು ಮೋದಿ, ಅಮಿತ್‌ ಶಾ ರನ್ನು ಕತ್ತೆ ಕಾಯಲು ಆಯ್ಕೆ ಮಾಡಿ‌ ಕಳಿಸಿದ್ದಾರಾ?: ಪ್ರಿಯಾಂಕ್ ಖರ್ಗೆ

Update: 2025-09-30 14:43 IST

ಕಲಬುರಗಿ: ಎಲ್ಲವನ್ನೂ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿನೇ ಪರಿಹಾರ ಮಾಡ್ಬೇಕಾ? ಮೋದಿ ಹಾಗೂ ಶಾ ಅವರನ್ನ ಕತ್ತೆ ಕಾಯಲು ಬಿಜೆಪಿಗರು ಆಯ್ಕೆ ಮಾಡಿ‌ ಕಳಿಸಿದ್ದಾರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಮಾತೆತ್ತಿದ್ದರೆ ವಿಶ್ವಗುರು, ಮಹಾನ್ ನಾಯಕ ಎಂದು ಕರೆಯುತ್ತೀರಾ, ದೇವರಂತ ಹೇಳುತ್ತಿದ್ದೀರಿ, 12 ವರ್ಷಗಳಲ್ಲಿ ಕರ್ನಾಟಕಕ್ಕೆ ಅವರೇನು ಕೊಟ್ಟಿದ್ದಾರೆ, ಎಲ್ಲವೂ ವಿರೋಧ ಪಕ್ಷದವರೇ ಕೊಡಬೇಕಾ? ಪರಿಹಾರ ಕೊಡಲು ಆಗದಿದ್ದರೆ ಕುರ್ಚಿ ಬಿಟ್ಟು ತೊಲಗಲಿ ಎಂದು ಹೇಳಿದರು.

ಪರಿಹಾರ ಘೋಷಣೆಗೆ ನಮಗೆ ಅಂಕಿ ಅಂಶ ಬೇಡ್ವಾ? ಅಂಕಿ ಅಂಶ ಇಲ್ಲದೇ ಪರಿಹಾರ ಬಿಡುಗಡೆ ಮಾಡೋಕ್ಕಾಗತ್ತಾ? ಎಂದು ಪ್ರಶ್ನಿಸಿದ ಅವರು, ಜಂಟಿ ಸಮೀಕ್ಷೆ ಮುಗಿದ ಮೇಲೆ ಪರಿಹಾರ ಕೊಡುತ್ತೇವೆ ಎಂದರು.

ನಮ್ಮ ಕಲಬುರಗಿಗೆ ಸಂತೋಷ ಅಂದ್ರೆ, ನಾನು ಮಂತ್ರಿ ಆದ ಮೇಲೆ ಬಿಜೆಪಿ ನಾಯಕರು ಕಲಬುರಗಿಗೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿಗೆ ಎಷ್ಟು ಸೀಟು ಬಂದಿದೆ.? ಅವರಿಂದ ನಾವು ಆಡಳಿತ ಮಾಡೋದು ಕಲಿಯಬೇಕಾ? ಎಂದು ಬಿಜೆಪಿ ವಿರುದ್ದ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News