×
Ad

ಹಾವೇರಿ: ಅರಣ್ಯ ಇಲಾಖೆ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ

Update: 2023-10-30 08:26 IST

ಹಾವೇರಿ: ಅರಣ್ಯ ಇಲಾಖೆ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಅರಣ್ಯ ಅಧಿಕಾರಿಗಳಾದ ಆರ್ ಎಫ್ ಓ ಪರಮೇಶ್ವರ ಪೇಲನವರ ಹಾಗೂ ಆರ್ ಎಫ್ ಓ ಮಹಾಂತೇಶ ನ್ಯಾಮತಿ ಗೆ ಸೇರಿದ ಮನೆ ಸಹಿತ 9 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾವೇರಿ, ಕುರಬಗೊಂಡ ಗ್ರಾಮದಲ್ಲಿರುವ ಪರಮೇಶ್ವರ ಪೇಲನವರ ಮೂವರು ಪತ್ನಿಯರ ಮನೆ ಸೇರಿದಂತೆ 6 ಕಡೆ ಹಾಗೂ ಮಹಾಂತೇಶ ನ್ಯಾಮತಿಗೆ ಸೇರಿದ ಮನೆ ಸೇರಿದಂತೆ ಮೂರು ಕಡೆ ದಾಳಿ ನಡೆದಿದೆ.

ಹಾವೇರಿಯ ಶಿವಾಜಿನಗರ,  ವರದಾನೇಶ್ವರಿ ಪಾಕ್೯ ನಲ್ಲಿರುವ ಎರಡು ಮನೆ, ಕುರುಬಗೊಂಡ ಗ್ರಾಮದ ಮನೆ ಹಾಗೂ ಹೆಡಿಗೊಂಡದ ಬಳಿ ಇರುವ ಫಾಮ್೯ ಹೌಸ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.



ರಾಜ್ಯದಾದ್ಯಂತ ಇಂದು ಹಲವು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News