×
Ad

ಸರಕಾರ ಹೊಸ ಜಾತಿ ಸೃಷ್ಟಿ ಮಾಡಿಲ್ಲ : ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2025-09-17 22:14 IST

ಬೆಂಗಳೂರು, ಸೆ.17: ಕ್ರಿಶ್ಚಿಯನ್ ಉಪ ಜಾತಿ ಸಂಬಂಧ ರಾಜ್ಯ ಸರಕಾರ ಯಾವುದೇ ಹೊಸ ಜಾತಿ ಸೃಷ್ಟಿ ಮಾಡಿಲ್ಲ. ಈ ಹಿಂದೆ ಗುರುತಿಸಿಕೊಂಡಿರುವ ಜಾತಿಗಳನ್ನೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಮರು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಶ್ಚಿಯನ್ ಉಪ ಜಾತಿ ಸಂಬಂಧ ಈಗಾಗಲೇ ಇತರೆ ಸಮೀಕ್ಷೆಗಳಲ್ಲಿ ಉಲ್ಲೇಖ ಮಾಡಲಾಗಿತ್ತು. ಅಲ್ಲದೇ ಅವರ ಮೂಲ ತಿಳಿದುಕೊಳ್ಳುವ ದೃಷ್ಟಿಯಿಂದ ಕಲಂನಲ್ಲಿ ತಿಳಿಸಲಾಗಿದೆ ಹೊರತು ಯಾವುದೇ ಜಾತಿ ಸೃಷ್ಟಿ ಮಾಡುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ವಿವರಿಸಿದರು.

ಹೊಸ ಜಾತಿಗಳನ್ನು ಸೃಷ್ಟಿ ಮಾಡಲು ಆಗಲ್ಲ. ಯಾರು ಯಾವ ಧರ್ಮ ಪಾಲನೆ ಮಾಡಬೇಕು ಅವರಿಗೆಲ್ಲ ಸಂವಿಧಾನದಲ್ಲಿ ಅವಕಾಶ ಇದೆ. ಜನರು ಕಾಲ ಕಾಲದಲ್ಲಿ ಅವರಿಗೆ ಇಷ್ಟ ಇರುವ ಧರ್ಮಕ್ಕೆ ಹೋಗಲು ಮುಕ್ತ ಅವಕಾಶ ಸಹ ಸಂವಿಧಾನದಲ್ಲಿದೆ. ಸ್ವಯಂ ಪ್ರೇರಿತರಾಗಿ ಯಾರ ಬಲವಂತ ಒತ್ತಡ ಇಲ್ಲದೇ ಯಾವ ಧರ್ಮಕ್ಕೂ ಹೋಗಬಹುದು. ಅದನ್ನೇ ಮುಖ್ಯಮಂತ್ರಿ ಹೇಳಿದ್ದು ಅದನ್ನು ಬಿಟ್ಟು ಬೇರೇನೂ ಹೇಳಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದಸರಾ ಸಿದ್ದತೆ ಬಗ್ಗೆ ಮಾತನಾಡಿದ ಅವರು, ಸಿದ್ದತೆ ಚೆನ್ನಾಗಿ ನಡೆಯುತ್ತಿದೆ. ಏರ್ ಶೋ , ಹೆಲಿಕಾಪ್ಟರ್ ಶೋ, ಡ್ರೋನ್ ಶೋ ಎಲ್ಲ ಇದೆ. ಯಾವುದೇ ಗೊಂದಲ, ವಿವಾದ ಇಲ್ಲದೆ ದಸರಾ ನಡೆಯಲಿದೆ ಎಂದು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News