×
Ad

ರಾಜಕೀಯ ಪಿತೂರಿಯಿಂದ ಸಾಕ್ಷಿ ಇಲ್ಲದಿದ್ದರೂ ನನ್ನ ವಿರುದ್ಧ ಅಪಹರಣ ಪ್ರಕರಣ ದಾಖಲು : ಎಚ್‌.ಡಿ.ರೇವಣ್ಣ

Update: 2024-05-05 18:54 IST

ಬೆಂಗಳೂರು : ನನ್ನ‌ ವಿರುದ್ದ ವ್ಯವಸ್ಥಿತವಾಗಿ ರಾಜಕೀಯ ಷಡ್ಯಂತ್ರ ಮಾಡಲಾಗಿದ್ದು, ದುರುದ್ದೇಶದಿಂದಲೇ ನನ್ನನ್ನು ಬಂಧಿಸಲಾಗಿದೆ ಎಂದು ಜೆಡಿಎಸ್‌ ಮುಖಂಡ, ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಬಂಧನದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ಒಂದು‌ ಕಪ್ಪು‌ ಚುಕ್ಕೆಯಿಲ್ಲದೆ ನಡೆದುಕೊಂಡಿದ್ದೇನೆ. ದುರುದ್ದೇಶದಿಂದಲೇ ನನ್ನನ್ನು ಬಂಧಿಸಲಾಗಿದೆ. ರಾಜಕೀಯ ಪಿತೂರಿಯಿಂದ ಯಾವುದೇ ಸಾಕ್ಷಿ ಇಲ್ಲದಿದ್ದರೂ ನನ್ನ ವಿರುದ್ಧ ಅಪಹರಣ ಪ್ರಕರಣ ಹಾಕಲಾಗಿದೆ. ಇವೆಲ್ಲವನ್ನೂ‌ ಎದುರಿಸುವ ಶಕ್ತಿ ನನಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News