×
Ad

ನನಗೂ ಹೆಸರು ಕರೆಯೋಕೆ ಜನರಿದ್ದಾರೆ, ನನ್ ಜೊತೆನೂ 5 ಲಕ್ಷ ಜನ ಸೆಲ್ಫಿ ತಗೊಂಡವ್ರೆ ಕುಮಾರಣ್ಣ..: ಸದನದಲ್ಲಿ ಎಚ್‍ಡಿಕೆ-ಶಿವಲಿಂಗೇಗೌಡ ಜಟಾಪಟಿ

Update: 2023-07-05 22:45 IST

ಬೆಂಗಳೂರು: ಬುಧವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆ ಆರಂಭಿಸಿದ್ದು,  ಈ ವೇಳೆ ಹಾಸನ ಜಿಲ್ಲೆಯ ಶಾಸಕರೊಬ್ಬರು’ ಎಂದು ಕುಮಾರಸ್ವಾಮಿ ಹೇಳುತ್ತಿದ್ದಂತೆ ಎದ್ದು ನಿಂತ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ನಾನು ಹೆಸರು ಇಟ್ಟುಕೊಂಡೆ ಬಂದಿದ್ದೇನೆ, ಕಸುವು ಇಲ್ಲದೆ ಬಂದಿಲ್ಲ. ಅದು ಯಾಕೆ ಹಾಸನ ಜಿಲ್ಲೆಯ ಶಾಸಕರು ಅಂತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. 

''ನಮ್ಮ ಹೆಸರು ಹೇಳಿ. ನಿಮ್ಮ ಹೆಸರು ಹೇಳೋಕೆ 10ಲಕ್ಷ ಜನ ಇದ್ದರೆ, ನನಗೂ ಹೆಸರು ಕರೆಯೋಕೆ ಜನರಿದ್ದಾರೆ, ನನ್ ಜೊತೆನೂ 5 ಲಕ್ಷ ಜನ ಸೆಲ್ಫಿ ತಗೊಂಡವ್ರೆ'' ಎಂದರು.

‘ನಾವು ನಿಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲವೇ? ನಾವು ನಿಮ್ಮನ್ನು ಕುಮಾರಣ್ಣ ಎಂದು ಕರೆಯೋದಿಲ್ಲವೇ? ವಿಶ್ವಾಸ ಇದ್ದಾಗ ನಿಮ್ಮ ಜೊತೆ ಇದ್ದೆವು, ವಿಶ್ವಾಸ ಇಲ್ಲದಿದ್ದಾಗ ಹೊರಬಂದಿದ್ದೇವೆ’ ಎಂದು ಶಿವಲಿಂಗೇಗೌಡ ಹೇಳುತ್ತಿದ್ದಂತೆ, ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ‘ಆಯ್ತು ಸ್ವಲ್ಪ ಕೇಳಿ ಶಿವಲಿಂಗೇಗೌಡರೆ’ ಎಂದು ಮಾತು ಮುಂದುವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News